More

    ಪೊಲೀಸರನ್ನು ಪರೀಕ್ಷಿಸಲು ಕರೆ ಮಾಡಿದೆ…!;ರಾಜಭವನಕ್ಕೆ ಹುಸಿ ಬಾಂಬ್ ಪ್ರಕರಣ

    ಬೆಂಗಳೂರು: ರಾಜಭವನ ಭದ್ರತೆಗೆ ಇದ್ದ ಪೊಲೀಸರನ್ನು ಗಮನಿಸಿ ತಮಾಷೆ ಮತ್ತು ಅಲರ್ಟ್ ಆಗಿದ್ದಾರೆಯೆ ಎಂಬುದನ್ನು ಪರೀಕ್ಷಿಸಲು ಹುಸಿ ಬಾಂಬ್ ಕರೆ ಮಾಡಿದ್ದಾಗಿ ಬಂಧಿತ ಆರೋಪಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡಳ್ಳಿ ಗ್ರಾಮದ ನಿವಾಸಿ ಭಾಸ್ಕರ್ (34) ಬಂಧಿತ. ಸೋಮವಾರ ರಾತ್ರಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಬಂಧಿಸಿದ್ದರು.
    ಬಿಕಾಂ ಪದವೀಧರನಾದ ಭಾಸ್ಕರ್, ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದಾನೆ.

    ಸೋಮವಾರ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಈತ ರಾಜಭವನದ ಮುಂದೆ ನಡೆದು ಹೋಗುವಾಗ ಪೊಲೀಸರು ಭಾರೀ ಭದ್ರತೆಯಲ್ಲಿ ಇರುವುದು ಗಮನಿಸಿ ಮೊಬೈಲ್‌ನಲ್ಲಿ ಗೂಗಲ್‌ನಲ್ಲಿ ಎನ್‌ಐಎ ಸಹಾಯವಾಣಿ ನಂಬರ್ ಹುಡುಕಿ ಕರೆ ಮಾಡಿ ೆನ್ ಆ್ ಮಾಡಿಕೊಂಡಿದ್ದ. ಅಲ್ಲಿಂದ ಮೆಜೆಸ್ಟಿಕ್ ಮೂಲಕ ಆಂಧ್ರಪ್ರದೇಶದ ಚಿತ್ತೂರಿಗೆ ಬಸ್ಸಿನಲ್ಲಿ ಹೋಗಿದ್ದ ಆರೋಪಿ ಗಣಪತಿ ದೇವಸ್ಥಾನದಲ್ಲಿ ಇದ್ದಾಗ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಲ್ಲ ಕಡೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಗಮನಿಸಿದ್ದೆ. ರಾಜಭವನ ಮುಂಭಾಗ ಪೊಲೀಸ್ ಭದ್ರತೆ ನೋಡಿ ತಮಾಷೆ ಮಾಡಲು ಮತ್ತು ಎಷ್ಟು ಅಲರ್ಟ್ ಆಗಿದ್ದಾರೆ ಎಂಬುದನ್ನು ಪರೀಕ್ಷೆ ಮಾಡಲು ಕರೆ ಮಾಡಿದ್ದೆ. ಬಾಂಬ್ ಕರೆ ಬಂದಾಗ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗುತ್ತಾರೆ ಎಂಬುದನ್ನು ತಿಳಿಯಲು ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಆರೋಪಿಯ ಪೂರ್ವಪರಶೀಲನೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts