More

    ಕೃಷಿಯಲ್ಲಿ ತಾಂತ್ರಿಕ ಕ್ರಾಂತಿ; 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌

    ನವದೆಹಲಿ: ಕೃಷಿಯಲ್ಲಿ ಕ್ರಾಂತಿಕ ಬದಲಾವಣೆ ಆಗುತ್ತಿದೆ. ಮಹಿಳಾ ಸಭಲೀಕರಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು ಸ್ಮಾರ್ಟ್ ಮಾಡುವ ಭಾಗವಾಗಿ ಕೇಂದ್ರ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಿದ್ಧಪಡಿಸಲಾದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

    2023-24 ಮತ್ತು 2025-26ರ ನಡುವೆ 15,000 ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ರೈತರಿಗೆ ಬಾಡಿಗೆಗೆ ಡ್ರೋನ್ ಒದಗಿಸಿ ಉದ್ಯೋಗ ಪಡೆಯುವ ಯೋಜನೆ ರೂಪಿಸಲಾಗಿದೆ.

    ಈ ಯೋಜನೆಗೆ ಕೇಂದ್ರ ಸರ್ಕಾರ 1,261 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಕೇಂದ್ರವು ಈ ಯೋಜನೆಯಡಿಯಲ್ಲಿ ಗರಿಷ್ಠ 8 ಲಕ್ಷ ರೂ.ವರೆಗೆ 80% ಆರ್ಥಿಕ ನೆರವು ನೀಡುತ್ತದೆ. ಫಲಾನುಭವಿಗಳಿಗೆ 5 ದಿನಗಳ ಕಾಲ ಡ್ರೋನ್ ಬಳಕೆ ತರಬೇತಿ ನೀಡಲಾಗುವುದು. ನಂತರ ಇನ್ನೂ 10 ದಿನಗಳ ಕಾಲ ಡ್ರೋನ್ ಮೂಲಕ ಕೃಷಿ ಸೇವೆಗಳ ಬಗ್ಗೆ ತರಬೇತಿ ನೀಡಲಿದ್ದಾರೆ.

    ಡ್ರೋನ್ ನೀಡುವ ಯೋಜನೆ ಜತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಯೋಜನೆಯನ್ನು  2024 ಜನವರಿ 1 ರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಅನ್ನ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. 

    ಅತ್ಯೋಂದಯ ಯೋಜನೆಯ ಫಲಾನುಭವಿಗಳಿಗೆ 35 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುವುದು. ಈ ಯೋಜನೆಯಡಿ ದೇಶದ ಸುಮಾರು 81 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯಡಿ ಐದು ವರ್ಷಗಳಲ್ಲಿ 11.80 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಭರಿಸಲಿದೆ.

    5 ಕೆಜಿ ಉಚಿತ ರೇಶನ್​ ಯೋಜನೆ 5 ವರ್ಷ ವಿಸ್ತರಣೆ; ಮಹಿಳಾ ಗುಂಪುಗಳಿಗೆ ಡ್ರೋನ್​ ನೀಡಲು ಕೇಂದ್ರ ಸಂಪುಟ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts