More

    ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ನವದೆಹಲಿ: ಹಿರಿಯ ನಾಗರಿಕರ ಕ್ಷೇಮ ಮತ್ತು ವೃದ್ಧಾಪ್ಯದಲ್ಲಿ ಆದಾಯ ಸುರಕ್ಷತೆಯನ್ನು ಖಾತರಿಗೊಳಿಸುವ ಪ್ರಧಾನಮಂತ್ರಿ ವಯವಂದನಾ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಪರಿಶೀಲನೆಗೆ ಒಳಪಟ್ಟಿದೆ. ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಪ್ರಸ್ತಾವನೆಯಲ್ಲಿರುವ ಅಂಶಗಳಿವು:

    ಇದನ್ನೂ ಓದಿ: ಓಲಾ ಕ್ಯಾಬ್​ ಆರಂಭವಾದರೂ 1,400 ಸಿಬ್ಬಂದಿ ಬೀದಿಗೆ ಬಂದಿದ್ದೇಕೆ?

    • ಪಿಎಂವಿವಿವೈಯನ್ನು 2020ರ ಮಾರ್ಚ್​ 31ರಿಂದ ಮುಂದಿನ ಮೂರು ವರ್ಷದ ಅವಧಿಗೆ ಅಂದರೆ 2023ರ ಮಾರ್ಚ್​ 31ರ ತನಕ ವಿಸ್ತರಿಸುವುದು
      ಆರಂಭದಲ್ಲಿ ವಾರ್ಷಿಕ ಶೇಕಡ 7.4 ಬಡ್ಡಿ ದರವನ್ನು 2020-21ರ ಅವಧಿಗೆ ಘೋಷಿಸಲಾಗಿದ್ದು, ನಂತರ ಪ್ರತಿವರ್ಷವೂ ಪರಿಷ್ಕರಣೆಗೊಳ್ಳಲಿದೆ.
    • ಪ್ರತಿ ವರ್ಷ ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್​ 1ರಿಂದ ಅನ್ವಯವಾಗುವಂತೆ ಸೀನಿಯರ್ ಸಿಟಿಜನ್ಸ್​ ಸೇವಿಂಗ್ಸ್ ಸ್ಕೀಮ್​(ಎಸ್​​ಸಿಎಸ್​ಎಸ್) ನ ಪರಿಷ್ಕೃತ ಬಡ್ಡಿದರ ಘೋಷಿಸಬೇಕು. ಇದಕ್ಕೆ ಗರಿಷ್ಠ ಮಿತಿ ಶೇಕಡ 7.75 ಇರಲಿದೆ.
    • ಎಲ್​ಐಸಿ ಸೂಚಿತ ಮಾರ್ಕೆಟ್ ರೇಟ್ ಆಫ್ ರಿಟರ್ನ್​ ಮತ್ತು ಈ ಯೋಜನೆಯಲ್ಲಿರುವ ಖಚಿತವಾದ ರೇಟ್ ಆಫ್ ರಿಟರ್ನ್​ ನಡುವಿನ ವ್ಯತ್ಯಾಸದ ವೆಚ್ಚಕ್ಕೆ ಅನುಮೋದನೆ ನೀಡುವುದು.

    ಇದನ್ನೂ ಓದಿ: ಮುಸ್ಲಿಮರ ದುಡ್ಡು ಮುಸ್ಲಿಮರಿಗಷ್ಟೇ, ಕರೊನಾ ನಿಧಿಗೆ ಅಲ್ಲ ಎಂದ ಶಾಸಕ ಜಮೀರ್​ ಅಹ್ಮದ್​- ಹಣ ಕೊಡುವವರಿಗೂ ಅಡ್ಡಗಾಲು!

    • ಈ ಯೋಜನೆಯಲ್ಲಿ ಹೊಸ ಪಾಲಿಸಿಗಳಿಗೆ ಅನ್ವಯವಾಗುವಂತೆ ಮೊದಲ ವರ್ಷ ನಿರ್ವಹಣಾ ವೆಚ್ಚವನ್ನು ಒಟ್ಟು ನಿಧಿಯ ವಾರ್ಷಿಕ ಶೇಕಡ 0.5ಕ್ಕೆ ಸೀಮಿತಗೊಳಿಸುವುದು ಮತ್ತು ಆನಂತರ ಎರಡನೇ ವರ್ಷದಿಂದ ಮುಂದಿನ ಒಂಭತ್ತು ವರ್ಷದ ತನಕ ವಾರ್ಷಿಕ ಶೇಕಡ 0.3 ನಿಗದಿಪಡಿಸುವುದು.
    • ಪ್ರತಿವರ್ಷ ಯೋಜನೆಯ ಬಡ್ಡಿದರ ನಿಗದಿಪಡಿಸುವ ಅಧಿಕಾರ ವಿತ್ತ ಸಚಿವರದ್ದಾಗಿರಲಿದೆ. ಯೋಜನೆಯ ಎಲ್ಲ ನಿಯಮ ನಿಬಂಧನೆಗಳಲ್ಲಿ ಬೇರಾವುದೇ ವ್ಯತ್ಯಾಸವಿಲ್ಲ.

    ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ ಪರಿಷ್ಕರಿಸಿದ್ದು ವಾರ್ಷಿಕ 12,000 ರೂಪಾಯಿ ಪಿಂಚಣಿ ಪಡೆಯಬೇಕಾದರೆ 1,56,658 ರೂಪಾಯಿ ಹೂಡಿಕೆ ಮಾಡಬೇಕು. ಅದೇ ರೀತಿ, ಮಾಸಿಕ 1,000 ರೂಪಾಯಿ ಪಿಂಚಣಿ ಪಡೆಯಬೇಕಾದರೆ 1,62,162 ರೂಪಾಯಿಯನ್ನು ಹೂಡಿಕೆ ಮಾಡಬೇಕು. (ಏಜೆನ್ಸೀಸ್) 

    Quiz

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts