More

    ಬಡ ಮಹಿಳೆಯರಿಗೆ ಇನ್ನೂ 3 ಸಿಲಿಂಡರ್​ ಉಚಿತ – ಕೇಂದ್ರ ಸಚಿವ ಸಂಪುಟ ಒಪ್ಪಿಗೆ

    ನವದೆಹಲಿ: ಕರೊನಾ ಕೋವಿಡ್​ 19 ವೈರಸ್​ ಸೋಂಕು ತಡೆಯುವ ಸಲುವಾಗಿ ಘೋಷಿಸಿರುವ ಲಾಕ್​ಡೌನ್ ಕಾರಣಕ್ಕೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ನವೆಂಬರ್ ತನಕ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸುವ ಯೋಜನೆ ಸೇರಿ ಮೂರು ವಿಚಾರಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಮೂಲಕ ದೇಶದ 81 ಕೋಟಿ ಬಡವರಿಗೆ ಪ್ರತಿಯೊಬ್ಬರಿಗೂ ತಲಾ 5 ಕಿಲೋ ಆಹಾರ ಧಾನ್ಯ ಮತ್ತು ಒಂದು ಕಿಲೋ ಬೇಳೆಕಾಳನ್ನು ಇನ್ನೂ ಐದು ತಿಂಗಳು ವಿತರಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇದಲ್ಲದೆ, ದೇಶದ 7.4 ಕೋಟಿ ಬಡ ಮಹಿಳೆಯರಿಗೆ ಸೆಪ್ಟೆಂಬರ್ ತನಕ ಮೂರು ಅಡುಗೆ ಸಿಲಿಂಡರ್​ ಉಚಿತವಾಗಿ ಸಿಗಲಿದೆ. ಇದಕ್ಕೂ ಮೊದಲು ಏಪ್ರಿಲ್​-ಜೂನ್ ತನಕ ಈ ಕೊಡುಗೆ ನೀಡಲಾಗಿತ್ತು ಎಂದು ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಅಲ್ಪಾವಧಿ ಸಾಲಗಳ ಎಂಸಿಎಲ್​ಆರ್ 5-10 ಮೂಲಾಂಶ ಕಡಿತಗೊಳಿಸಿದ ಎಸ್​ಬಿಐ

    ಇದಲ್ಲದೆ, ಉದ್ಯೋಗಿಗಳ ಇಪಿಎಫ್​ ಪಾಲು ಶೇಕಡ 24 (ಶೇಕಡ 12 ಉದ್ಯೋಗಿಯದ್ದೂ, ಶೇಕಡ 12 ಉದ್ಯೋಗದಾತರದ್ದೂ) ಅನ್ನು ಇನ್ನೂ ಮೂರು ತಿಂಗಳು ಕೇಂದ್ರ ಸರ್ಕಾರವೇ ಭರಿಸಲಿದೆ. ಇದು ಜೂನ್ ತಿಂಗಳಿಂದ ಆಗಸ್ಟ್​ ವರೆಗಿನ ಮೂರು ತಿಂಗಳ ಅವಧಿಗೆ ಅನ್ವಯವಾಗಲಿದೆ. ಸರ್ಕಾರದ ಈ ನಡೆಯಿಂದ 72 ಲಕ್ಷ ಉದ್ಯೋಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ಸರ್ಕಾರ 4,860 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಚಿವ ಜಾವಡೇಕರ್ ವಿವರಿಸಿದರು. (ಏಜೆನ್ಸೀಸ್)

    ಸೂಟ್​​ಕೇಸ್​ನಲ್ಲಿತ್ತು ಪೀಸ್​ ಪೀಸ್ ಆಗಿರುವ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts