More

    ಸಿಬ್ಬಂದಿಗೆ ಕರೊನಾ, ಈಡನ್​ ಗಾರ್ಡನ್ಸ್ ಕ್ರೀಡಾಂಗಣ ಸೀಲ್​ಡೌನ್​!

    ಕೋಲ್ಕತ: ಬಂಗಾಳ ಕ್ರಿಕೆಟ್​ ಸಂಸ್ಥೆಯ (ಸಿಎಬಿ) ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸಿಎಬಿ ಮುಖ್ಯ ಕಚೇರಿ ಇರುವ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಕ್ರೀಡಾಂಗಣದ ಆವರಣವನ್ನು ಸಂಪೂರ್ಣ ಸೀಲ್​ಡೌನ್​ ಮಾಡಲಾಗಿದೆ. ಇನ್ನು 7 ದಿನಗಳ ಕಾಲ ಕ್ರೀಡಾಂಗಣ ಸಂಪೂರ್ಣವಾಗಿ ಬಂದ್​ ಆಗಿರಲಿದೆ.

    ‘ಸಿವಿಲ್​ ಇಂಜಿನಿಯರ್​ ಆಗಿರುವ ಚಂದನ್​ ದಾಸ್​ಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್​ ವರದಿ ಬಂದಿದೆ. ಆತ ಸಿಎಬಿಯ ಟೆಂಪರರಿ ಸಿಬ್ಬಂದಿಯಾಗಿದ್ದಾನೆ. ಆತನಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ 7 ದಿನಗಳ ಕಾಲ ಕಚೇರಿಗೆ ಆಗಮಿಸದಂತೆ ನಮಗೆಲ್ಲರಿಗೂ ಸೂಚಿಸಲಾಗಿದೆ. ಇದೇ ವೇಳೆ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದ ಸಂಪೂರ್ಣ ಆವರಣದ ಸ್ಯಾನಿಟೈಸ್​ ನಡೆಯಲಿದೆ’ ಎಂದು ಸಿಎಬಿ ಅಧ್ಯಕ್ಷ ಅವಿಷೇಕ್​ ದಾಲ್ಮಿಯಾ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಸಚಿನ್​ ತೆಂಡುಲ್ಕರ್​ ಜೀವನ ಬದಲಿಸಿದ ಮೂವರು ಗುರುಗಳು ಯಾರು ಗೊತ್ತೇ?

    ಈಡನ್​ ಗಾರ್ಡನ್ಸ್​ ಕ್ರೀಡಾಂಗಣವನ್ನು ಕ್ರಿಕೆಟಿಗರ ಅಭ್ಯಾಸಕ್ಕೆ ಅಧಿಕೃತವಾಗಿ ತೆರೆದಿರಲಿಲ್ಲ. ಸಿಎಬಿ ಕಚೇರಿಯಲ್ಲೂ ಅಗತ್ಯವಿರುವ ಕೆಲ ಸಿಬ್ಬಂದಿಯಷ್ಟೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಬಂಗಾಳದಲ್ಲೂ ಈಗ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಕೋಲ್ಕತ ನಗರದಲ್ಲೇ ಒಟ್ಟಾರೆ ಕರೊನಾ ಪ್ರಕರಣಗಳ ಸಂಖ್ಯೆ 7 ಸಾವಿರದ ಸನಿಹ ತಲುಪಿದೆ.

    25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts