More

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಮೂವರು ಪಿಎಫ್​ಐ ಕಾರ್ಯಕರ್ತರ ಬಂಧನ

    ಲಖ್ನೌ: ಕಳೆದ ಡಿಸೆಂಬರ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗವಹಿಸಿದ್ದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ)ದ ಮೂವರು ಕಾರ್ಯಕರ್ತರನ್ನು ಲಖ್ನೌ ಪೊಲೀಸರು ಬಂಧಿಸಿದ್ದಾರೆ.

    ಇವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಹಿಂಸಾಚಾರಕ್ಕೆ ಕಾರಣವಾಗಿದ್ದರು. ಅಲ್ಲದೆ, ಸುಳ್ಳು ಸುದ್ದಿ ಹಬ್ಬಿಸಿ ಪ್ರತಿಭಟಿಸುವಂತೆ ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಪಿಎಫ್​ಐನ ಕಾರ್ಯಕರ್ತರಾದ ಶಕೀಲ್​ ಉರ್​ ರೆಹಮಾನ್​, ಶಬಿ ಖಾನ್​ ಮತ್ತು ಅರ್ಷದ್​ ಬಂಧಿತರು. ಕಳೆದ ಡಿಸೆಂಬರ್​ 24ರಂದು ಪಿಎಫ್​ಐನ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ವಾಸೀಮ್​ ಅಹಮದ್​, ನದೀಮ್​ ಮತ್ತು ವಿಭಾಗೀಯ ಅಧ್ಯಕ್ಷ ಅಶ್ಫಾಕ್​ ಅವರನ್ನು ಲಖ್ನೌ ಪೊಲೀಸರು ಬಂಧಿಸಿದ್ದರು.

    ರಾಜ್ಯದ ವಿವಿಧ ಭಾಗಗಳಿಂದ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಸಂಘಟನೆಯನ್ನು ರದ್ದು ಪಡಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು.

    ವಿವಿಧ ಮೂಲಗಳಿಂದ ಪಿಎಫ್​ಐಗೆ 120 ಕೋಟಿ ರೂಪಾಯಿ ಹರಿದು ಬಂದದ್ದನ್ನು ಮತ್ತು ದೇಶಾದ್ಯಂತ ನಡೆದ ಪ್ರತಿಭಟನ ವೇಳೆಯ ಹಿಂಸಾಚಾರಕ್ಕೆ ಸಂಘಟನೆಯ ಸಂಬಂಧವನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts