More

    ಪಾಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ: ಚುನಾವಣೆಯೇ ಕಾರಣ?

    ಇಸ್ಲಮಾಬಾದ್​: ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ ಈ ಚುನಾವಣೆಗೂ ಮುನ್ನ ಹಲವು ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಜನವರಿ 31 ರಂದು ಖೈಬರ್ ಪಖ್ತುಂಖ್ವಾ ರಾಜ್ಯದ ಬಜೌರ್ ಜಿಲ್ಲೆಯಲ್ಲಿ ರಾಜಕೀಯ ನಾಯಕ ರೆಹಾನ್ ಝೆಬ್ ಖಾನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

    ಇದನ್ನೂ ಓದಿ: ಕಾಶಿಯ ಜ್ಞಾನವಾಪಿ ಮಸೀದಿಯೊಳಗೆ ಮೂರು ದಶಕದ ನಂತರ ಮೊದಲ ಪೂಜೆ!

    ರೆಹಾನ್ ಝೆಬ್ ಖಾನ್ ಅವರು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕರಾಗಿದ್ದಾರೆ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಎನ್​ಎ -8 ಮತ್ತು ಪಿಕೆ-22 ಸ್ಥಾನಗಳಿಂದ ಸ್ಪರ್ಧಿಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್‌ಫಾನ್ ಜೊತೆ ರೆಹಾನ್ ಇರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರೆಹಾನ್ ಝೆಬ್ ಖಾನ್ ಚುನಾವಣಾ ಪ್ರಚಾರಕ್ಕಾಗಿ ಸಾದಿಕಾಬಾದ್‌ನ ಫಟಕ್ ಬಜಾರ್ ಪ್ರದೇಶಕ್ಕೆ ತೆರಳಿದ್ದರು. ಅಷ್ಟರಲ್ಲಿ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಫೌಂಡೇಶನ್ ಕೂಡ ರೆಹಾನ್ ಹತ್ಯೆಯನ್ನು ಖಂಡಿಸಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾದೇಶಿಕ ಮುಖ್ಯ ಕಾರ್ಯದರ್ಶಿ.. ಪೊಲೀಸ್ ಮಹಾನಿರೀಕ್ಷಕರಿಂದ ಘಟನೆಯ ಕುರಿತು ವರದಿಯನ್ನು ಕೇಳಿದೆ. ಇದರೊಂದಿಗೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ. ಇದಕ್ಕೂ ಮುನ್ನ ಬಲೂಚಿಸ್ತಾನದ ಚಮನ್ ನಗರದಲ್ಲಿ ಅವಾಮಿ ನ್ಯಾಷನಲ್ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

    ಈ ಘಟನೆಯಲ್ಲಿ ಒಬ್ಬ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ. ಅದೇ ರೀತಿ, ಕ್ವೆಟ್ಟಾದ ಸರಿಯಾಬ್ ರಸ್ತೆಯಲ್ಲಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಚುನಾವಣಾ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಮೂವರು ಕಾರ್ಯಕರ್ತರು ಗಾಯಗೊಂಡಿದ್ದಾರೆ.

    ಜ್ಞಾನವಾಪಿ ಮಸೀದಿಯಲ್ಲಿ ವ್ಯಾಸ ಮಹರ್ಷಿ ನೆಲಮಾಳಿಗೆ: ಪುರಾತತ್ವ ಇಲಾಖೆ ಹೇಳುವುದೇನು? ಈ ಕುರಿತು ಇನ್ನಷ್ಟು ಮಾಹಿತಿ..

    ಬಲೂಚಿಸ್ತಾನದ ಹಂಗಾಮಿ ಗೃಹ ಸಚಿವ ಜುಬೈರ್ ಜಮಾಲಿ ದಾಳಿಯನ್ನು ಖಂಡಿಸಿದ್ದಾರೆ. ಇತ್ತೀಚೆಗಷ್ಟೇ ಸ್ವಾಬಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶಾ ಖಾಲಿದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಲ್ಲದೆ ಪಿಕೆ-104ರಿಂದ ಸ್ಪರ್ಧಿಸಿದ್ದ ಕಲೀಮುಲ್ಲಾ ಖಾನ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts