More

    ಉತ್ತರ ಪ್ರದೇಶದಲ್ಲಿ ಸಿಎಎ ಮಾದರಿ ಹಿಂಸಾಚಾರ ಸಂಚು?

    ನವದೆಹಲಿ/ಹಾಥರಸ್: ಉತ್ತರಪ್ರದೇಶದ ಹಾಥರಸ್ ಪ್ರಕರಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾತಿ ಕಲಹಗಳನ್ನು ಪ್ರಚೋದಿಸಲು ಹಾಗೂ ಯೋಗಿ ಆದಿತ್ಯನಾಥ ಸರ್ಕಾರದ ಹೆಸರು ಕೆಡಿಸಲು ದೊಡ್ಡ ಮಟ್ಟದಲ್ಲಿ ಸಂಚು ರಚಿಸಲಾಗಿದೆ ಎಂಬ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು 19 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಾಥರಸ್​ನಲ್ಲಿ 6 ಪ್ರಕರಣಗಳು ದಾಖಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದೇಶದ್ರೋಹ, ಪಿತೂರಿ ಮತ್ತು ಧಾರ್ವಿುಕ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಅನೇಕ ಆರೋಪಗಳನ್ನು ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಡಲಾಗಿದೆ.

    ‘ಜಸ್ಟಿಸ್ ಫಾರ್ ಹಾಥರಸ್.ಸಿಎಆರ್​ಆರ್​ಡಿ.ಸಿಒ’ ಎಂಬ ವೆಬ್​ಸೈಟ್ ಸಂಚಿನಲ್ಲಿ ಪ್ರಮುಖವಾಗಿದ್ದು, ಅದರಲ್ಲಿ ಪೊಲೀಸರಿಂದ ಪಾರಾಗಿ ಹೇಗೆ ಪ್ರತಿಭಟಿಸುವುದು, ಅಶ್ರುವಾಯುಗಳಿಂದ ಹೇಗೆ ರಕ್ಷಿಸಿಕೊಳ್ಳುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಬಳಿಕ ವೆಬ್​ಸೈಟ್ ಅನ್ನು ತೆಗೆದು ಹಾಕಲಾಗಿದೆ. ಹಾಥರಸ್ ಪ್ರಕರಣದ ಮೂಲಕ ಸಿಎಎ ಪ್ರತಿಭಟನೆ ಮಾದರಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಹಾಗೂ ಯೋಗಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ದೊಡ್ಡ ಮಟ್ಟದ ಸಂಚು ರೂಪಿಸಲಾಗಿತ್ತು. ಇದರಲ್ಲಿ ವಿದೇಶಿಗರ ಕೈವಾಡವೂ ಇದ್ದು, ‘ಜಸ್ಟಿಸ್ ಫಾರ್ ಹಾಥರಸ್.ಸಿಎಆರ್​ಆರ್​ಡಿ.ಸಿಒ’ಗೆ ವಿದೇಶಿ ಫಂಡ್ ಬರುತ್ತಿತ್ತು ಎನ್ನಲಾಗಿದೆ.ಈ ವೆಬ್​ಸೈಟ್ ಮೂಲಕ ಹೆಚ್ಚು ಜನರನ್ನು ಸಂರ್ಪಸಿ ನಕಲಿ ಫೋಟೋಗಳೊಂದಿಗೆ ಹಿಂಸಾಚಾರವನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿತ್ತು. ಇಷ್ಟೇ ಅಲ್ಲದೇ ನಕಲಿ ವೆಬ್​ಸೈಟ್​ಗಳ ಮೂಲಕ ದೆಹಲಿ, ಕೋಲ್ಕತ ಮತ್ತು ಅಹಮದಾಬಾದ್ ಮೂಲಕವೂ ಜನರಿಗೆ ಮಾಹಿತಿ ರವಾನಿಸಲಾಗುತ್ತಿತ್ತು. ಪೊಲೀಸರಿಗೆ ಈ ಬಗ್ಗೆ ಶಂಕೆ ಮೂಡುತ್ತಿದ್ದಂತೆ ಅನೇಕ ವೆಬ್​ಸೈಟ್​ಗಳು ಮುಚ್ಚಿವೆ. ಆದಾಗ್ಯೂ ಈ ಎಲ್ಲ ವೆಬ್​ಗಳ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

    ಡಿಸಿ ಸೂಚನೆಯಂತೆ ದಹನ

    ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಶವವನ್ನು ಹಾಥರಸ್​ನ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸಕರ್ ಅವರ ನಿರ್ದೇಶನದಂತೆ ರಾತ್ರೋರಾತ್ರಿ ದಹನ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ಸಂತ್ರಸ್ತೆಯ ಕುಟುಂಬಸ್ಥರೂ ಇದೇ ಆರೋಪ ಮಾಡಿದ್ದು, ಪುತ್ರಿಯ ಮುಖವನ್ನು ಕೊನೆಯ ಬಾರಿ ನೋಡಲು ಸಹ ಅವಕಾಶ ಮಾಡಿಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಕರಣ ತಿರುಚಲಾಗಿದೆಯೇ?

    ಹಾಥರಸ್​ನ ಅತ್ಯಾಚಾರ ಪ್ರಕರಣವನ್ನು ತಿರುಚಲಾಗಿದೆ ಎಂದು ವಾರಾಣಸಿ ಕ್ಷೇತ್ರದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಶಶಿ ಕುಮಾರ್ ಆರೋಪಿಸಿದ್ದು, ಈ ಕುರಿತು ಅನೇಕ ಮಾಹಿತಿಗಳನ್ನು ಅವರು ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ. ‘ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಕುಟುಂಬಕ್ಕೂ ಹಾಗೂ ಸಂತ್ರಸ್ತೆ ಕುಟುಂಬಕ್ಕೂ ಮೊದಲಿನಿಂದಲೂ ದ್ವೇಷ ಇತ್ತು. ಕಾಲಾನಂತರದಲ್ಲಿ ಸಂತ್ರಸ್ತೆ ಹಾಗೂ ಸಂದೀಪ್ ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಇದು ಎರಡೂ ಕುಟುಂಬಗಳಿಗೆ ತಿಳಿದು ಜಗಳ ನಡೆದ ಬಳಿಕ ಗ್ರಾಮದ ಮುಖಂಡರು ಸಂಧಾನ ಮಾಡಿದ್ದರು. ಸೆ.14ರಂದು ಸಂತ್ರಸ್ತೆಯನ್ನು ಭೇಟಿಯಾಗಲು ಅವರ ಜಮೀನಿಗೆ ಸಂದೀಪ್ ತೆರಳಿದ್ದಾಗ ಅದನ್ನು ಕಂಡ ಸಂತ್ರಸ್ತೆ ಸಹೋದರ ಆಕೆ ಮೇಲೆ ಹಲ್ಲೆ ನಡೆಸಿದ್ದ ಎಂದು ಶಶಿ ಕುಮಾರ್ ಬರೆದುಕೊಂಡಿದ್ದಾರೆ.

    ಆಜಾದ್ ಸೇರಿ 400 ಜನರ ವಿರುದ್ಧ ಕೇಸ್

    ಕರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ಹೆಚ್ಚು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಭೀಮ್​ವಿು ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಸುಮಾರು 400 ಜನರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಪ್ ಸಂಸದ ಸಂಜಯ್ ಸಿಂಗ್ ಹಾಥರಸ್​ಗೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಂಜಯ್ ಸಿಂಗ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಮಸಿ ಎರಚಿರುವ ಘಟನೆ ನಡೆದಿದೆ.

    ನಿರ್ಭಯಾ ರೇಪಿಸ್ಟ್​ಗಳ ಪರ ಹೋರಾಡಿ ಸೋತಿದ್ದ ವಕೀಲರಿಂದಲೇ ಹಾಥರಸ್​ ಅತ್ಯಾಚಾರಿಗಳ ಪರ ವಕಾಲತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts