More

    ಸಿಎ ಆಕಾಂಕ್ಷಿಗಳಿಗೆ ಪ್ರಾಯೋಗಿಕ ತರಬೇತಿಯಿಂದ ಒಂದು ತಿಂಗಳು ವಿನಾಯ್ತಿ

    ನವದೆಹಲಿ: ಇನ್​ಸ್ಟಿಟ್ಯೂಟ್​ ಆಫ್​ ಚಾರ್ಟರ್ಡ್​ ಅಕೌಟೆಂಟ್ಸ್​ ಆಫ್​ ಇಂಡಿಯಾ ಸಂಸ್ಥೆ (ಐಸಿಎಐ) ಸಿಎ ಆಕಾಂಕ್ಷಿಗಳಿಗೆ ಪ್ರಾಯೋಗಿಕ ತರಬೇತಿ ಆರಂಭಕ್ಕೆ ಒಂದು ತಿಂಗಳ ವಿನಾಯ್ತಿ ನೀಡಿದೆ.

    ಸಿಎ ಅಂತಿಮ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಏಪ್ರಿಲ್​ 30ರ ಒಳಗಾಗಿ ಪ್ರಾಯೋಗಿಕ ತರಬೇತಿಯನ್ನು ಆರಂಭಿಸಬೇಕಿತ್ತು. ಹಾಗಿದ್ದರೆ ಮಾತ್ರ 2020ರ ನವೆಂಬರ್​ನಲ್ಲಿ ನಡೆಸಲಾಗುವ ಅಂತಿಮ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ದೇಶಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ತರಬೇತಿ ಆರಂಭಕ್ಕೆ ಅನುಕೂಲಕರ ವಾತಾವರಣವಿಲ್ಲ. ಹೀಗಾಗಿ ಒಂದು ಬಾರಿಯ ಕ್ರಮವಾಗಿ ಪ್ರಾಯೋಗಿಕ ತರಬೇತಿ ಆರಂಭಿಸಲು ಮೇ 31ರವರೆಗೆ ಅವಕಾಶ ಕಲ್ಪಿಸಲಾಗಿದೆ.

    ಈ ಕುರಿತು ಸುತ್ತೋಲೆ ಹೊರಡಿಸಿರುವ ಐಸಿಎಐ, ಮೇ 31ರೊಳಗಾಗಿ ಪ್ರಾಯೋಗಿಕ ತರಬೇತಿ ಆರಂಭಿಸುವ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

    ಈ ಮೊದಲು ಮೇ ತಿಂಗಳಲ್ಲಿ ನಡೆಸಲಾಗುವ ಅಂತಿಮ ಪರೀಕ್ಷೆಯನ್ನು ಸಂಸ್ಥೆ ಮುಂದೂಡಿತ್ತು. ಮೇ ಬದಲಾಗಿ ಜೂನ್​ 19ರಿಂದ ಜುಲೈ 4ರವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು.

    ವಿದ್ಯಾರ್ಥಿಗಳೇ ಒತ್ತಡಕ್ಕೊಳಗಾಗಬೇಡಿ… ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಇಲ್ಲಿವೆ ಯುಜಿಸಿ ಸಲಹೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts