ನವದೆಹಲಿ: ಟ್ವಿಟ್ಟರ್ನಲ್ಲಿ ಖತಾರ್ ವಿಮಾನ ಏರಬೇಡಿ ಎಂಬ ಅಭಿಯಾನ ಜೋರಾಗಿದೆ. ಭಾರತೀಯರು ಯಾರೂ ಈ ವಿಮಾನ ಹತ್ತಬೇಡಿ ಎಂಬ ಮನವಿ ಮಾಡಲಾಗುತ್ತಿದೆ. ಅರೆ.. ಏನಿದು..? ಈ ಅಭಿಯಾನ ಏಕೆ ಕೈಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಬಿಜೆಪಿ ಮುಖಂಡರಿಬ್ಬರ ಹೇಳಿಕೆ ಗಲ್ಫ್ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಖತಾರ್ ಕೈಗೊಂಡ ನಿರ್ಣಯಗಳ ವಿರುದ್ಧ ಈಗ ಭಾರತೀಯರು ಸೇರಿಗೆ ಸವಾ ಸೇರು ಎಂಬಂತೆ ಈ ಅಭಿಯಾನವನ್ನು ಶುರು ಮಾಡಿದ್ದಾರೆ.
https://twitter.com/Shyam_Vir_Singh/status/1533687002989637632?s=20&t=EdrOk9NghEEitthc5TnA1g
ಬಿಜೆಪಿ ಮುಖಂಡರಾದ ನೂಪರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಖತಾರ್ ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಟ್ವಿಟಿಗರು ಖತಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೆಲ ಟ್ವಿಟ್ಟಿಗರು, ಖತಾರ್ವಿಮಾನಯಾನವನ್ನು ನಿರ್ಬಂಧಿಸಿ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಇದಕ್ಕೆ ಹಲವರು ಸಾಥ್ ನೀಡಿದ್ದಾರೆ. ಇನ್ನು ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)