More

    ಪುಣ್ಯ ಕಾರ್ಯಗಳಿಂದ ದೇವರ ಒಲಿಸಿಕೊಳ್ಳಲಿ

    ಮುಗಳಖೋಡ: ಮಾನವ ಜನ್ಮ ಶ್ರೇಷ್ಠವಾಗಿದ್ದು, ಪುಣ್ಯ ಕಾರ್ಯಗಳ ಮೂಲಕ ದೇವರನ್ನು ಒಲಿಸಿಕೊಳ್ಳಬೇಕು ಎಂದು ಪಂಢರಪುರದ ರೇಣು ಮಹಾರಾಜರು ಹೇಳಿದರು.

    ಮುಗಳಖೋಡ ಸಮೀಪದ ಕಪ್ಪಲಗುದ್ದಿ ಗ್ರಾಮದಲ್ಲಿ ಭಾನುವಾರ ಹರಿಭಕ್ತ ಸಂಪ್ರದಾಯದ ಪದ್ಧತಿಯಂತೆ ವಿಠ್ಠಲ-ರುಕ್ಮಿಣಿ, ಜ್ಞಾನದೇವ, ತುಕಾರಾಮ ಮಹಾರಾಜರು ಹಾಗೂ ಹನುಮಂತ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರರಿಗೆ ಉಪಕಾರ ಮಾಡುವುದು ಮನುಷ್ಯ ಧರ್ಮ. ಪುಣ್ಯದ ಕಾರ್ಯದಲ್ಲಿ ತೊಡಗುವವರಿಗೆ ಸಕಲ ಅಷ್ಟ ಐಶ್ವರ್ಯಗಳು ಸಿಗುತ್ತವೆ ಎಂದರು.

    ಮೂರ್ತಿಗಳಿಗೆ ಅಭಿಷೇಕ, ಹೋಮ, ಹವನ ನೆರವೇರಿಸಲಾಯಿತು. ಅನ್ನ ಸಂತರ್ಪಣೆ ಜರುಗಿತು. ರೇಣು ಮಹಾರಾಜರನ್ನು ಪಾಂಡುರಂಗ ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು. ಹಿರಿಯರಾದ ಕಲ್ಲೋಳೆಪ್ಪ ತೈಕಾರ, ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮನಿ, ಗಂಗಪ್ಪ ಕುರಿನಿಂಗ, ಮುಖ್ಯಶಿಕ್ಷಕ ಪ್ರಕಾಶ ದಿವಾಕರ, ಡಾ.ಎಂ.ಬಿ ಶಿರೋಳ, ಕೃಷ್ಣಪ್ಪ ತೈಕಾರ, ನಿಂಗಪ್ಪ ಸನದಿ, ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಲ ನಾಯಿಕ, ಜ್ಞಾನೇಶ್ವರ ತೈಕಾರ, ಭೀಮಪ್ಪ ಮಂಟೂರ, ಮಂಜು ಮೇತ್ರಿ, ಬಾಳಪ್ಪ ಐದಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts