More

    ನಗುವುದರಿಂದ ಆಯಸ್ಸು ವೃದ್ಧಿ

    ಅಥಣಿ: ಕೋಶ ಓದಬೇಕು-ದೇಶ ಸುತ್ತಬೇಕು. ಇದರಿಂದ ಹೆಚ್ಚಿನ ಅನುಭವ ದೊರೆಯುತ್ತದೆ. ನಗು ಬದುಕಿನ ಜೀವಾಳವಾಗಬೇಕು. ದೀರ್ಘಾಯುಷ್ಯಕ್ಕೆ ಇದು ಮನೆಮದ್ದಾಗಿದೆ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.

    ಪಟ್ಟಣದ ಜೆ.ಎ.ಹೈಸ್ಕೂಲ್ ಆವರಣದಲ್ಲಿ ರೋಟರಿ ಕ್ಲಬ್ ರಜತ ಮಹೋತ್ಸವ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎಲ್ಲರೂ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಹೊರತು ಪುಸ್ತಕ ಓದುತ್ತಿಲ್ಲ. ಇದು ಕಳವಳಕಾರಿ ಸಂಗತಿ. ಜ್ಞಾನವೃದ್ಧಿಗೆ ಪುಸ್ತಕ ಓದಬೇಕು. ಹಿರಿಯ ಹಾಸ್ಯ ಸಾಹಿತಿ ಬೀಚಿ ಅವರ ಸಾಹಿತ್ಯ ಓದಿ ದೇಶ, ವಿದೇಶ ಸಂಚರಿಸಲು ನಿರ್ಗಳವಾಗಿ ಮಾತನಾಡಲು ಸಾಧ್ಯವಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕು ಎಂದರು.

    ಅಥಣಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ರೋಟರಿ ಕ್ಲಬ್ ಅಧ್ಯಕ್ಷ ಅನಿಲ ದೇಶಪಾಂಡೆ ಮಾತನಾಡಿದರು. ಹಾಸ್ಯ ಕಲಾವಿದರಾದ ನರಸಿಂಹ ಜೋಶಿ, ಬಸವರಾಜ ಮಹಾಮನೆ ಮಿಮಿಕ್ರಿ ಮಾಡಿ ಗಮನ ಸೇಳೆದರು.ಗಣ್ಯರಾದ ಕೆ.ಎ.ವನಜೋಳ, ರಾವಸಾಬ ಐಹೊಳೆ, ರಫಿಕ್ ಡಾಂಗೆ, ಮಾಮೂನ್ ಪಾರ್ಥನಹಳ್ಳಿ, ವೈಭವ ಐಹೊಳೆ, ರೋಟರಿ ಸದಸ್ಯರಾದ ಅರುಣ ಸೌದಾಗರ, ಪ್ರುಲ ಪಡನಾಡ, ಅರುಣ ಯಲಗುದ್ರಿ, ಭರತ ಸೋಮಯ್ಯ, ದೀಪಕ ಪಾಟೀಲ, ಶೇಖರ ಕೋಲಾರ, ಸಚೀನ ಮಿರಜ, ಬಾಹುಬಲಿ ಅಸ್ಕಿ, ಮೇಘರಾಜ ಪರಮಾರ, ಆನಂದ ಕುಲಕರ್ಣಿ, ಸಂತೊಷ ಬೊಮ್ಮಣವರ, ಸಚೀನ ದೇಸಾಯಿ, ಸುರೇಶ ಬಳೊಳ್ಳಿ, ಶ್ರೀಕಾಂತ ಅಥಣಿ, ಆನಂದ ಗುಂಜಿಗಾವಿ, ಚಿದಾನಂದ ಮೇತ್ರಿ, ಹಣಮಂತ ಐಗಳಿ, ನಿಜಗುಣ ಜಿದ್ದಿ, ಡಿ.ಡಿ.ಮೆಕನಮರಡಿ, ಬಾಳಪ್ಪ ಬುಕಿಟಗಾರ, ಸುರೇಶ ಪಾಟೀಲ, ಬಾಹುಬಲಿ ಯರಂಡೊಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts