More

    ವ್ಯವಹಾರ ಜ್ಞಾನ ವೃದ್ಧಿಗೆ ಮಕ್ಕಳಸಂತೆ ಪೂರಕ

    ಸೊರಬ: ವ್ಯವಹಾರ ಜ್ಞಾನವಿದ್ದರೆ ಸಮಾಜಮುಖಿ ವ್ಯಕ್ತಿಯಾಗಲು, ಸದೃಢ ಬದುಕು ಕಟ್ಟಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳ ಸಂತೆ ಪರಿಣಾಮಕಾರಿ ಎಂದು ಶಿಕ್ಷಣ ಸಂಯೋಜಕ ಅರುಣ್‌ಕುಮಾರ್ ಹೇಳಿದರು.

    ತಾಲೂಕಿನ ಕೆರೆಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಪ್ರಾತ್ಯಕ್ಷಿಕೆ ಸರಳವಾಗಿ ಗಣಿತ ಕಲಿಕೆಗೆ ಸಹಾಯಕವಾಗುತ್ತದೆ. ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ಇದು ನೆರವಾಗುತ್ತದೆ ಎಂದರು.
    ಮಕ್ಕಳು ತಮ್ಮ ಹೊಲದಲ್ಲಿ ಬೆಳೆದ ತರಹೇವಾರಿ ತರಕಾರಿಗಳು, ಹಣ್ಣು, ದಿನಸಿ, ತಾವೇ ತಯಾರಿಸಿದ ತಂಪು ಪಾನೀಯ, ಚಾ, ಮಂಡಕ್ಕಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಅವಶ್ಯಕತೆಗೆ ಪೂರಕವಾದ ಅನೇಕ ಸಾಮಗ್ರಿಗಳನ್ನು ವ್ಯಾಪಾರಕ್ಕಿಟ್ಟಿದ್ದರು. ಸಂತೆಯಲ್ಲಿ ಕೊಳ್ಳಲು ಗ್ರಾಹಕರು ಕೂಡಾ ಮುಗಿಬಿದ್ದಿದ್ದರು. ಪಾಲಕರು ಮಕ್ಕಳ ವ್ಯವಹಾರ ಜ್ಞಾನ ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ಹಳೆಯ ನಾಣ್ಯಗಳು, ನೋಟುಗಳು, ದೇಶ-ವಿದೇಶಗಳ ಕರೆನ್ಸಿಗಳ ಪ್ರದರ್ಶನ ಸಹ ಹಮ್ಮಿಕೊಳಲಾಗಿತ್ತು.
    ಮುಖ್ಯಶಿಕ್ಷಕ ಕೆ.ಸಿ.ಶಿವಕುಮಾರ, ಎಸ್‌ಡಿಎಂಸಿ ಅಧ್ಯಕ್ಷ ಪರುಶುರಾಮ, ಉಪಾಧ್ಯಕ್ಷೆ ದೀಪಾ, ಸದಸ್ಯರಾದ ಡಾ. ವಿಶ್ವನಾಥ ನಾಡಿಗೇರ್, ಕೆ.ಬಿ.ಶಿವಪ್ಪ, ಶ್ರೀದೇವಿ, ಚಿದಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts