More

    ಪಾಲಿಕೆಯ 110 ಹಳ್ಳಿಗಳಲ್ಲಿ 9,382 ಮನೆಗಳಿಗೆ ನೀರಿನ ಸಂಪರ್ಕ : ಲಭ್ಯವಿರುವ ನೀರಿನಲ್ಲಿ ವಾರಕ್ಕೊಮ್ಮೆ ನೀರು

    ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿರುವ ಜಲಮಂಡಳಿ, ತೀವ್ರವಾಗಿ ನೀರಿನ ಅಭಾವ ಎದುರಿಸುತ್ತಿರುವ ಕೆಲವು ಹಳ್ಳಿಗಳಿಗೆ ಲಭ್ಯವಿರುವ 4ನೇ ಹಂತದ ಯೋಜನೆಯಡಿ 9,382 ಮನೆಗಳಿಗೆ ನೀರಿನ ಸಂಪರ್ಕ ಒದಗಿಸಿದೆ.

    ಪಾಲಿಕೆ ವ್ಯಾಪ್ತಿಗೆ 2008ರಲ್ಲಿ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಮಹಾನಗರ ಪಾಲಿಕೆ ಮಾಡಲಾಗಿದೆ. ಇಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲೂೃಎಸ್‌ಎಸ್‌ಬಿ, ಬೆಸ್ಕಾಂ ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಈ ಪೈಕಿ ಹೊರವಲಯದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಜಲಮಂಡಳಿ ಕಾವೇರಿ 5ನೇ ಹಂತದ ಯೋಜನೆ ಕೈಗೆತ್ತಿಕೊಂಡಿದ್ದು, 2023-24ನೇ ಸಾಲಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಆದರೆ, ಅವಧಿಗಿಂತ ಮುಂಚೆಯೇ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಕೆಲವು ಹಳ್ಳಿಗಳ 9,382 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದೆ.

    ಈಗಿರುವ ಸೌಲಭ್ಯದಡಿಯೇ ನೀರು: ಜಲಮಂಡಳಿ ವತಿಯಿಂದ 2012ರಲ್ಲಿ ಕೈಗೊಂಡಿದ್ದ ಕಾವೇರಿ 4ನೇ ಹಂತದ ಯೋಜನೆ ಅಡಿಯಲ್ಲಿ ನೀರು ಒದಗಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಯೋಜನೆಯಡಿ ಲಭ್ಯವಿರುವ ನೀರಿನಲ್ಲಿಯೇ ಮೂರ್ನಾಲ್ಕು ದಿನ ಅಥವಾ ವಾರಕ್ಕೊಮ್ಮೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡ ನಂತರ ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಸಮರ್ಪಕ ಸ್ಯಾನಿಟರಿ ಲೈನ್ ಲಭ್ಯವಾಗುತ್ತದೆ ಎಂದು ಜಲಮಂಡಳಿ ಅಧಿಕಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    110 ಹಳ್ಳಿ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಪಡೆದ ಹಳ್ಳಿಗಳು:
    ಹಳ್ಳಿಗಳ ಹೆಸರು   ನೀರಿನ ಸಂಪರ್ಕ
    ಚಳ್ಳಕೆರೆ            191
    ಹೊರಮಾವು       1,451
    ವರ್ತೂರು          3
    ಹರಳೂರು         1,605
    ಶೆಟ್ಟಿಹಳ್ಳಿ           890
    ಸಿಡೇದಹಳ್ಳಿ        124
    ಜಿಕೆವಿಕೆ            236
    ರಾಚೇನಹಳ್ಳಿ       642
    ಅಂಜನಾಪುರ       719
    ಗೊಟ್ಟಿಗೆರೆ          811
    ಬೇಗೂರು          1,390
    ಕೂಡ್ಲು             1,306
    ವಲ್ಲಭಾನಗರ       14
    ಒಟ್ಟು               9,382

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts