More

    ‘ಜಲಮಿತ್ರ’ ಯೋಜನೆಗೆ ಉತ್ತಮ ಸ್ಪಂದನೆ; 30 ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ

    ಬೆಂಗಳೂರು: ‘ಜಲಮಿತ್ರ’ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, 30 ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಜನರು ನೋಂದಣಿಯಾಗಿದ್ದಾರೆ. ಇವರಿಗೆ ವಲಯವಾರು ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದ್ದು, ವಾಟರ್​ ಸರ್​ಪ್ಲಸ್​ ಬೆಂಗಳೂರು ಅಭಿಯಾನದ ರಾಯಭಾರಿಗಳಾಗಿ ಜಲಮಿತ್ರರು ಕಾರ್ಯನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ. ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

    ದಕ್ಷಿಣ ವಲಯದಲ್ಲಿ ‘ಜಲಮಿತ್ರ’ರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ನೀರಿನ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ನೀರು ಸರಬರಾಜು, ಒಳಚರಂಡಿ ನಿರ್ವಹಣೆ, ನೀರು ಸಂರಣೆ, ಮಳೆನೀರು ಕೊಯ್ಲು ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸ್ವಯಂಸೇವೆಗೆ ಸಿದ್ಧರಿರುವರನ್ನು ‘ಜಲಮಿತ್ರ’ರನ್ನಾಗಿ ನೇಮಿಸುವ ಅಭಿಯಾನ ಇದಾಗಿದೆ.

    ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ, ಸಾರ್ವಜನಿಕರಿಂದ ನೀರು ವ್ಯರ್ಥವಾಗುವ ವಿವರಗಳನ್ನು ಸಂಗ್ರಹಿಸುವುದು, ಒಳಚರಂಡಿ ಸಮಸ್ಯೆಗಳು, ನೀರಿನ ಸಂಗ್ರಹ ಸಂಪ್​ಗಳು ಮತ್ತು ಟ್ಯಾಂಕ್​ಗಳಿಂದ ನೀರು ಉಕ್ಕಿ ಹರಿಯುವುದನ್ನು ತಡೆಯುವುದು ಇವರ ಕರ್ತವ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts