More

    ನೀರಿನ ಸಂಪರ್ಕ ಪಡೆದವರ ವಿವರ ಡಿಜಿಟಲೀಕರಣಕ್ಕೆ ಜಲಮಂಡಳಿ ಯೋಜನೆ

    ಬೆಂಗಳೂರು: ಉದ್ಯಾನನಗರಿಯಲ್ಲಿ ನೀರಿನ ಸಂಪರ್ಕ ಪಡೆದವರ ವಿವರಗಳನ್ನು ಡಿಜಿಟಲೀಕರಣಕ್ಕೆ ಜಲಮಂಡಳಿ ಯೋಜನೆ ಆರಂಭಿಸಿದೆ. ಗ್ರಾಹಕರ ಪೂರ್ಣ ವಿವರಗಳು ಇಲ್ಲದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಿದ್ದು, ಆರ್​ಆರ್ ಸಂಖ್ಯೆ, ಮೊಬೈಲ್ ನಂಬರ್ ಸೇರಿ 16 ರೀತಿಯ ಮಾಹಿತಿ ಸಂಗ್ರಹಿಸಿ ಡಿಜಿಟಲ್ ರೂಪದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ.

    ನೀರಿನ ಸಂಪರ್ಕದ ಸಂಖ್ಯೆಯನ್ನು ಬಿಬಿಎಂಪಿಯ ಪಿಐಡಿ ಸಂಖ್ಯೆಯೊಂದಿಗೆ ಸಂರ್ಪಸುವ ಕಾರ್ಯವೂ ನಡೆಯಲಿದೆ. ಪ್ರತಿ ಕಟ್ಟಡದ ಸಂಪೂರ್ಣ ವಿವರ ಹಾಗೂ ನೀರಿನ ಸಂಪರ್ಕದ ವಿವರ ಜಲಮಂಡಳಿಗೆ ಲಭ್ಯವಾಗಲಿದ್ದು, ಆ ಕಟ್ಟಡಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯಾಗಿದ್ದರೆ ಪತ್ತೆ ಮಾಡಲು ಅನುಕೂಲವಾಗಿದೆ. ಮಾಹಿತಿ ಸಂಗ್ರಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ.

    ಇದನ್ನೂ ಓದಿ: ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ

    ವಿವರ ಸಂಗ್ರಹ ಏಕೆ?: ನಗರದಲ್ಲಿ 9.5 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕಗಳಿವೆ. ಲಾಕ್​ಡೌನ್​ನಿಂದ ಮನೆಮನೆಗೆ ರಸೀದಿ ನೀಡಲು ಸಾಧ್ಯವಾಗಿರಲಿಲ್ಲ. ಅಂತಹ ಸಮಯದಲ್ಲಿ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಆನ್​ಲೈನ್​ನಲ್ಲಿ ಪಾವತಿಸುವಂತೆ ಕೋರಲಾಗಿತ್ತು. ಈ ಪ್ರಕ್ರಿಯೆ ನಡೆಸುವ ವೇಳೆ ಅನೇಕ ನೀರಿನ ಸಂಪರ್ಕದ ಬಗ್ಗೆ ಪೂರ್ಣ ವಿವರ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಕಂಪ್ಯೂಟರ್​ನ ದತ್ತಾಂಶದಲ್ಲಿ ಸೇರ್ಪಡೆಗೊಳಿಸಲು ತೀರ್ವನಿಸಲಾಗಿದೆ

    ಪ್ರತಿ ಮನೆ ಭೇಟಿ: ಪ್ರತಿ ಮನೆಗೆ ತೆರಳಿ ಸಮೀಕ್ಷೆಯ ಅರ್ಜಿ ನೀಡಲಾಗುತ್ತದೆ. ಅದರಲ್ಲಿ ಹೆಸರು, ಆರ್​ಆರ್ ಸಂಖ್ಯೆ, ವಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಐಡಿ ಸಂಖ್ಯೆ, ಕಟ್ಟಡ ನಿರ್ಮಾಣದ ದಿನಾಂಕ, ನಿವೇಶನದ ವಿಸ್ತೀರ್ಣ, ಮಹಡಿಗಳು, ಕಟ್ಟಡದಲ್ಲಿರುವ ಮನೆಗಳ ಸಂಖ್ಯೆ, ಆಂತರಿಕ ಮೀಟರ್, ಎಸ್​ಟಿಪಿ, ಮಳೆನೀರು ಕೊಯ್ಲು, ಓವರ್ ಹೆಡ್ ಟ್ಯಾಂಕ್ ವಿವರ, ಬೋರ್​ವೆಲ್, ಒಳಚರಂಡಿ, ಟ್ಯಾಂಕ್​ನಲ್ಲಿ ವಾಲ್ವ್ ಅಳವಡಿಸಿರುವ ವಿವರಗಳನ್ನು ಭರ್ತಿ ಮಾಡಿ ಮುಂದಿನ ತಿಂಗಳು ನೀಡಬಹುದು ಅಥವಾ ಸಮೀಪದ ಸೇವಾ ಠಾಣೆಗೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ.

    ಹೋಂ ಕ್ವಾರಂಟೈನ್ ಮೇಲ್ವಿಚಾರಣೆಗೆ 460 ತಂಡ ರಚನೆ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts