More

    ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

    ಉಡುಪಿ: ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಶೆಟ್ಟಿ ಇಂದು ಹಾಡಹಗಲೇ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದನ್ನು ಅವರ ಡೆತ್​ನೋಟ್​ ಬಹಿರಂಗಪಡಿಸಿದೆ.

    ಸುಮಾರು 80 ವರ್ಷ ಪ್ರಾಯದ ಭೋಜಣ್ಣ ಶೆಟ್ಟಿ ಇಂದು ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್​ನಲ್ಲಿ ರಿವಾಲ್ವಾರ್​ನಿಂದ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದರು.

    ಇದೀಗ ಅವರ ಡೆತ್​ನೋಟ್ ಸಿಕ್ಕಿದ್ದು, ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಅವರು ಹೆಸರು ಪ್ರಸ್ತಾಪವಾಗಿದೆ. ಇಬ್ಬರೂ ಸೇರಿ 3.34 ಕೋಟಿ ರೂಪಾಯಿ ಮತ್ತು 5 ಕೆ.ಜಿ. ಬಂಗಾರ ಪಡೆದು ವಂಚಿಸಿದ್ದಾರೆ ಎಂದು ಡೆತ್​ನೋಟ್​ನಲ್ಲಿ ಆರೋಪಿಸಲಾಗಿದೆ.

    ಬಡ್ಡಿ ಆಸೆ ತೋರಿಸಿ ಹಣ ಪಡೆದಿದ್ದರು. ಆದರೆ ಬಡ್ಡಿ ನೀಡದೆ ಅಸಲೂ ಹಿಂದಿರುಗಿಸದೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದ ವಿಚಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿಗೂ ಹೋಗಿತ್ತು. ಈ ಸಂಬಂಧ ಅವರು ಐದಾರು ಬಾರಿ ರಾಜಿ ಪಂಚಾಯ್ತಿ ನಡೆಸಿದ್ದರು. ಆ ಬಳಿಕವೂ ಹಣ ಕೊಡದೆ ಸತಾಯಿಸಿದ್ದರಿಂದ ಬೇಸತ್ತು ಇಂದು ಗಣೇಶ್​ ಶೆಟ್ಟಿ ಮನೆ ಮುಂಭಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿ ಅವರಿಂದ ನಮ್ಮ ಮನೆಯವರಿಗೆ ಹಣ ವಸೂಲಿ ಮಾಡಿಸಿ ಮರಳಿಸುವಂತೆ ಭೋಜಣ್ಣ ಡೆತ್​​ನೋಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts