More

  ಪಠ್ಯದ ಜತೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಅವಶ್ಯ

  ಸೊರಬ: ಪ್ರಾಥಮಿಕ ಶಾಲಾ ಹಂತದಲ್ಲಿ ನಡೆಯುವ ಮಕ್ಕಳ ಸಂತೆ ಕಾರ್ಯಕ್ರಮ ಮಕ್ಕಳಲ್ಲಿನ ವ್ಯವಹಾರಿಕ ಜ್ಞಾನದ ವೃದ್ಧಿಗೆ ಪೂರಕವಾಗಿದೆ ಎಂದು ಬೆನ್ನೂರು ಗ್ರಾಪಂ ಅಧ್ಯಕ್ಷೆ ಶಿಲ್ಪಾ ರವಿ ಹೇಳಿದರು.
  ಸೋಮವಾರ ತಾಲೂಕಿನ ಕಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಮಾನ್ಯ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಅನುಷ್ಠನಗೊಳಿಸಿರುವುದು ಶ್ಲಾಘನೀಯ. ಇದರಿಂದ ಮಕ್ಕಳಲ್ಲಿ ಲೌಕಿಕ ಜ್ಞಾನದ ಬೆಳೆವಣಿಗೆಗೂ ಅನುಕೂಲವಾಗಲಿದೆ ಎಂದರು.
  ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಕಲರವ ಮನೆ ಮಾಡಿತ್ತು. ಮಕ್ಕಳು ಮನೆಗಳಲ್ಲಿ ಬೆಳೆದ ತರಹೇವಾರಿ ತರಕಾರಿಗಳು ಸೇರಿ ತೆಂಗಿನಕಾಯಿ, ತಂಪು ಪಾನೀಯ, ಚಹಾ ಮಂಡಕ್ಕಿ, ದವಸ ಧಾನ್ಯಗಳು ಸೇರಿ ಗ್ರಾಮಾಂತರ ಪ್ರದೇಶಗಳ ಅವಶ್ಯಕತೆಗೆ ಪೂರಕವಾದ ಅನೇಕ ಸಾಮಗ್ರಿಗಳನ್ನು ಮಾರಾಟ ಮಾಡಿದರು. ಗ್ರಾಮಸ್ಥರು ಮತ್ತು ಪಾಲಕರು ವಸ್ತುಗಳನ್ನು ಖರೀದಿಸಿ ಮಕ್ಕಳಿಗೆ ಉತ್ತೇಜನ ನೀಡಿದರು.
  ಗ್ರಾಪಂ ಸದಸ್ಯರಾದ ಎಂ.ಕೆ.ದೇವರಾಜ್, ಯಶೋಧಾ ಅಣ್ಣಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಇ.ವಸಂತ್, ಉಪಾಧ್ಯಕ್ಷೆ ಉಮಾಪತಿ, ಶಾಲಾ ಮುಖ್ಯ ಶಿಕ್ಷಕ ಎಸ್.ವಾಸುದೇವ್, ಚಂದ್ರಗುತ್ತಿ ಗ್ರಾಪಂ ಸದಸ್ಯ ಲೋಕೇಶ್, ಶಾಲಾ ಶಿಕ್ಷಕರಾದ ಗಣೇಶ್ ಪ್ರಸಾದ್, ನಾಮದೇವ್ ನಾಯ್ಕ್, ಅಕ್ಷಯ್ ಕುಮಾರ್, ಶ್ರೀಕೃಷ್ಣ, ಅಣ್ಣಪ್ಪ, ಆಶಾ, ಕಾವ್ಯಾ, ಸುವರ್ಣಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts