More

    ಗೊಂದಲದ ಗೂಡಾದ ಬಸ್​ ವ್ಯವಸ್ಥೆ; ಪ್ರಯಾಣಿಕರ ಪರದಾಟ

    ಬೆಂಗಳೂರು: ಇಂದಿನಿಂದ ಬಸ್​ ಸಂಚಾರಕ್ಕೆ ಸರ್ಕಾರವೇನೋ ಅನುವು ಮಾಡಿಕೊಟ್ಟಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ಸಂಚಾರ ಮಾರ್ಗಸೂಚಿಯು ಗೊಂದಲದ ಗೂಡಾಗಿದ್ದು, ಬಸ್​ ಸಿಬ್ಬಂದಿ ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಮಾತ್ರ ಸರ್ಕಾರ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಖಷಿಯಾದ ಪ್ರಯಾಣಿಕರು ಬಸ್​ ನಿಲ್ದಾಣಗಳಿಗೆ ದೌಡಾಯಿಸಿದ್ದಾರೆ. ಆದರೆ ಬೀದರ್​ ಹಾಗೂ ರಾಯಚೂರು ಸೇರಿದಂತೆ ದೂರದ ಊರುಗಳಿಗೆ ನಿಗದಿತ 7 ಗಂಟೆ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ ಸಾಧ್ಯವಾದರೂ ಅಲ್ಲಿಂದ ತಮ್ಮ ಹಳ್ಳಿಗಳಿಗೆ ಹೋಗಲು ಅವರಿಗೆ ಬಸ್​ ವ್ಯವಸ್ಥೆ ಇರುತ್ತದೆಯೇ?. ನಂತರ ಅವರೇನು ಮಾಡಬೇಕೆಂಬುದನ್ನು ಯೋಚಿಸಬೇಕಾಗಿದೆ.

    ಇದನ್ನೂ ಓದಿ: ಬಸ್​ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯವಾದ್ರೆ, ಇಲ್ಲಿ ಪ್ರಯಾಣಿಕರಿಗಾಗಿ ಬಸ್​ಗಳೇ ಕಾಯುತ್ತಿವೆ!

    ಊಟದ ವ್ಯವಸ್ಥೆ ಹೇಗೆ?:
    ದೂರದ ಪ್ರಯಾಣದ ವೇಳೆ ಮಾರ್ಗ ಮಧ್ಯೆ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಹೇಗೆ ಎಂಬುದು ಸಹ ಗೊಂದಲವನ್ನುಂಟು ಮಾಡಿದೆ. ಹೋಟೆಲ್​ಗಳನ್ನು ತೆರೆಯಲು ಅವಕಾಶವಿದ್ದರೂ ಪಾರ್ಸೆಲ್​ ಮಾತ್ರ ತೆಗೆದುಕೊಳ್ಳಲು ಅವಕಾಶ ಇದೆ. ಇನ್ನು ಪಾರ್ಸೆಲ್​ಗೆ ಸಮಯ ತೆಗೆದುಕೊಳ್ಳುವುದಲ್ಲದೇ, ಅದನ್ನು ತಂದು ಬಸ್​ನಲ್ಲಿ ತಿನ್ನುವ ವ್ಯವಸ್ಥೆ ಇದೆಯೇ? ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸದಿರುವುದು ಇದೀಗ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!

    ಪ್ರಯಾಣಿಕರ ಪರದಾಟ:
    10 ಗಂಟೆಯ ನಂತರ ಉತ್ತರ ಕರ್ನಾಟಕದ ದೂರದ ಕೆಲವು ಊರುಗಳಿಗೆ ಬಸ್​ ಇರುವುದಿಲ್ಲ ಎಂಬ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತು. ಈಗಾಗಲೇ ಬಸ್​ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೇಳಿಕೆಯಿಂದ ತಬ್ಬಿಬ್ಬಾಗಿದ್ದು, ಏನು ಮಾಡುವುದು ಎಂಬ ಯೋಚನೆಯಲ್ಲಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದರಿಂದ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಸ್​​ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಅವಧಿಯ ಮಿತಿ ಹೇರಿರುವುದರಿಂದ ನಿಗದಿತ ಸಮಯದಲ್ಲಿ ದೂರದ ಊರುಗಳಿಗೆ ಹೇಗೆ ತಲುಪುತ್ತಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.

    ಇದನ್ನೂ ಓದಿ: ಪಾಲಕರಿಗೆ ಹೆಚ್ಚುವರಿ ಶುಲ್ಕ ಬರೆ: 50ಕ್ಕೂ ಹೆಚ್ಚಿನ ಶಾಲೆಗಳ ವಿರುದ್ಧ ದೂರು, ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಕರೆ

    ರಾಜ್ಯಾದ್ಯಂತ ಬಸ್​ ಸಂಚಾರ ಆರಂಭ: ನಿಲ್ದಾಣಗಳಿಗೆ ಪ್ರಯಾಣಿಕರ ದೌಡು, ಮುನ್ನೆಚ್ಚರಿಕೆಗೆ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts