More

    ಹೊನ್ನಾವರದ ಮಹಿಮೆ ಗ್ರಾಮಕ್ಕೆ ಗುಡ್​ ನ್ಯೂಸ್​ ಕೊಟ್ಟ ಸುರೇಶ್​ ಕುಮಾರ್​! ಇನ್ನು ಮುಂದೆ ಬಸ್ಸಿಗಾಗಿ ಪರದಾಟವಿಲ್ಲ..

    ಬೆಂಗಳೂರು: ಬಸ್ಸಿನ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಪರದಾಡುತ್ತಿದ್ದ ಹೊನ್ನಾವರದ ಮಹಿಮೆ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಗುಡ್​ ನ್ಯೂಸ್​ ನೀಡಿದ್ದಾರೆ. ಇನ್ನು ಮುಂದೆ ಗ್ರಾಮದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚರಿಸಲಿವೆ ಎಂದು ಅವರು ತಿಳಿಸಿದ್ದಾರೆ.

    ರಾಜ್ಯ ಸಾರಿಗೆ ಸಂಸ್ಥೆಯು ಮಹಿಮೆ ಗ್ರಾಮದ ಮೂಲಕ ಹಾದುಹೋಗುವಂತೆ ಬಸ್​ಗಳನ್ನು ಕಾರ್ಯಾಚರಿಸಲು ಆದೇಶಿಸಿದೆ. ಇದರಿಂದ ಹೊನ್ನಾವರ ತಾಲೂಕಿನ ಮಹಿಮೆ ಮತ್ತು ಸುತ್ತಮುತ್ತಲ ಗ್ರಾಮಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ತಾವು ಮಹಿಮೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಗಮನಿಸಿದ್ದು, ಗ್ರಾಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೌಲಭ್ಯ ಒದಗಿಸಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಎಸ್. ಸವದಿಯವರಿಗೆ ಮನವಿ ಮಾಡಿದ ತಕ್ಷಣವೇ ಸ್ಪಂದಿಸಿ ಗ್ರಾಮಕ್ಕೆ ಬಸ್ ಕಾರ್ಯಾಚರಣೆಗೆ ಆದೇಶಿಸಿದ್ದಾರೆಂದು ಅವರು ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳ ವರದಿಯನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಒದಗಿಸಲು ಆದೇಶ ನೀಡುವುದಾಗಿ ತಿಳಿಸಿದ್ದರು. ಅದರಂತೆ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್​ಗಾಗಿ 8 ಕಿ.ಮೀ. ನಡೆಯವುದು ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

    ಮಹಿಮೆ ಗ್ರಾಮದ ವಿದ್ಯಾರ್ಥಿಗಳು ಪ್ರೌಢಶಾಲೆಗಾಗಿ ದೂರದ ಅಳ್ಳಂಕಿ (20 ಕಿ.ಮೀ.), ಜಲವಳಕರ್ಕಿ(25 ಕಿ.ಮೀ.), ಗೇರುಸೊಪ್ಪಕ್ಕೆ (16 ಕಿ.ಮೀ.) ಮತ್ತು ಪದವಿ ಪೂರ್ವ ಕಾಲೇಜಿಗೆ 40 ಕಿಮೀ ದೂರದ ಹೊನ್ನಾವರ ಪಟ್ಟಣಕ್ಕೆ ಹೋಗುತ್ತಾರೆ. ಆದರೆ ಅವರು ಬಸ್ ಗಾಗಿ ಮಹಿಮೆ ಕ್ರಾಸ್ ಗೆ 8 ಕಿ.ಮೀ. ದೂರ ನಡೆದುಕೊಂಡು ಹೋಗಬೇಕಿದೆ. ಹಾಗೆಯೇ ಮಳೆಗಾಲದಲ್ಲಿ ಮಹಿಮೆ ಗ್ರಾಮದ ಹಳ್ಳ ತುಂಬಿ ಹರಿಯುವುದರಿಂದ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತಗೊಂಡು ನಡೆದು ಹೋಗಲೂ ಸಹ ತೊಂದರೆಯಾಗಿತ್ತು.

    ಸೋಮವಾರ ವಿಧಾನಪರಿಷತ್ತಿನ ಕಲಾಪದಲ್ಲಿ ವಿಷಯ ಪ್ರಸ್ತಾಪವಾದಾಗ ಈ ಕುರಿತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹಿಮೆ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ನೀಡಿದ್ದ ಭರವಸೆ ಈಡೇರಿದಂತಾಗಿದೆ. ತಮ್ಮ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಎಸ್. ಸವದಿಯವರಿಗೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಬ್ಬಡ್ಡಿಯಲ್ಲಿ ಸೋತು ಆತ್ಮಹತ್ಯೆಗೆ ಶರಣಾದ ಬಬಿತಾ ಫೋಗಟ್‌ ಸೋದರ ಸಂಬಂಧಿ

    VIDEO| ಮಹಿಳೆಯರ ಒಳಉಡುಪು ಕದ್ದ ಖತರ್ನಾಕ್​ಗಳು! ಪ್ಯಾಂಟಿ ಚೋರ್​ ಅಬ್ದುಲ್​ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts