More

    ರಸ್ತೆ ಅಗಲೀಕರಣಕ್ಕೆ ಅಡ್ಡಿ ಮಾಡಿದರೆ ಕ್ರಮ

    ರಸ್ತೆ ಅಗಲೀಕರಣಕ್ಕೆ ಅಡ್ಡಿ ಮಾಡಿದರೆ ಕ್ರಮ

    ಬಾಳೆಹೊನ್ನೂರು (ಎನ್.ಆರ್.ಪುರ ತಾ.): ಕೆಲ ಅಂಗಡಿ ಮಾಲೀಕರು ಕಟ್ಟಡ ತೆರವುಗೊಳಿಸಲು ವಿರೋಧ ಮಾಡುತ್ತಿರುವುದರಿಂದ ಪಟ್ಟಣದ ರಸ್ತೆ ಅಗಲೀಕರಣ ಕಾರ್ಯ ಶೇ.10ರಷ್ಟು ಬಾಕಿ ಉಳಿದಿದೆ ಎಂದು ಶಾಸಕ ಟಿ.ಎಚ್.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಪಟ್ಟಣದ ಬಸ್ ನಿಲ್ದಾಣದ ಮುಂದುವರಿದ ಕಾಂಕ್ರಿಟೀಕರಣ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಾವು ಅಂಗಡಿ ಮಾಲೀಕರ ಮೇಲೆ ದೌರ್ಜನ್ಯವೆಸಗಿ ರಸ್ತೆ ಅಗಲೀಕರಣ ಮಾಡುತ್ತಿಲ್ಲ. ಊರಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಗಲೀಕರಣ ಮಾಡುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

    ರಾಷ್ಟ್ರೀಯ ಹೆದ್ದಾರಿಯಾದರೆ ಇಂದಲ್ಲಾ, ನಾಳೆ ನಾವು ಅಗಲೀಕರಣಕ್ಕೆ ನಮ್ಮ ಜಾಗ ಬಿಟ್ಟುಕೊಡಬೇಕಿದೆ. ಅದಕ್ಕೆ ಮುಂಚಿತವಾಗಿ ಈಗಲೇ ಸ್ವಯಂ ಪ್ರೇರಿತವಾಗಿ ಬಿಟ್ಟುಕೊಟ್ಟರೆ ಸಮಸ್ಯೆಯಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಮಾತುಕತೆ ನಡೆಸಿದ್ದು, ಒಪ್ಪಿಗೆ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಪಟ್ಟಣದ ಬಸ್ ನಿಲ್ದಾಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 1 ಕೋಟಿ ರೂ. ಅನುದಾನ ಅಗತ್ಯವಿದೆ. ಹಂತ ಹಂತವಾಗಿ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಈ ಹಿಂದೆ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಅವರು ನಿಲ್ದಾಣದ ಕಾಂಕ್ರಿಟೀಕರಣಕ್ಕೆ 25 ಲಕ್ಷ ರೂ. ಅನುದಾನ ನೀಡಿದ್ದು, ಅರ್ಧ ಕೆಲಸವಾಗಿತ್ತು. ಇನ್ನುಳಿದ ಕಾಮಗಾರಿಗೂ ಅವರೇ ಪುನಃ 25 ಲಕ್ಷ ರೂ. ನೀಡಿದ್ದಾರೆ ಎಂದರು.

    ನಿರ್ಲಕ್ಷ್ಯಂದ ಜಿಲ್ಲೆಗೆ ಕರೊನಾ ವೈರಸ್: ಸರ್ಕಾರದ ನಿರ್ಲಕ್ಷ್ಯಂದ ಜಿಲ್ಲೆಗೆ ಕರೊನಾ ಸೋಂಕು ಹರಡಲು ಕಾರಣವಾಗಿದೆ ಎಂದು ಟಿ.ಡಿ.ರಾಜೇಗೌಡ ದೂರಿದರು. ಮೇ ಅಂತ್ಯದವರೆಗೆ ಲಾಕ್​ಡೌನ್ ಮುಂದುವರಿಸಿ ಹೊರ ರಾಜ್ಯಗಳಿಂದ ಜಿಲ್ಲೆಗಳಿಗೆ ಜನರು ಪ್ರವೇಶಿಸದಂತೆ ನಿರ್ಬಂಧಿಸಬೇಕಿತ್ತು. ತುರ್ತು ಪರಿಸ್ಥಿತಿಗಳಲ್ಲಿ ಬರಲೇಬೇಕಿದ್ದರೆ ಹೊರ ರಾಜ್ಯಗಳಿಂದ ಬರುವವರನ್ನು ರಾಜ್ಯದ ಗಡಿಯಲ್ಲಿ ಲಾಡ್ಜ್, ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಿದ್ದರೆ ನಮ್ಮ ಜಿಲ್ಲೆಗೆ ಇಂದು ಕರೊನಾ ಸೋಂಕು ಬರುತ್ತಿರಲಿಲ್ಲ ಎಂದರು. ಕ್ಷೇತ್ರದಲ್ಲಿ ಪತ್ತೆಯಾಗಿರುವ ಸೋಂಕಿತರು ಎಲ್ಲಿಯೂ ತಿರುಗಾಡಿಲ್ಲ. ಹಾಗಾಗಿ ಆತಂಕಕ್ಕೆ ಒಳಗಾಗುವುದು ಬೇಡ. ಅವರನ್ನು ಜಿಲ್ಲಾ ಕೋವಿಡ್ ಘಟಕಕ್ಕೆ ಸ್ಥಳಾಂತರಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ ಎಂದರು ಹೇಳಿದರು.

    ಜಿಪಂ ಸದಸ್ಯೆ ಚಂದ್ರಮ್ಮ, ತಾಪಂ ಸದಸ್ಯ ಟಿ.ಎಂ.ನಾಗೇಶ್, ಗ್ರಾಪಂ ಅಧ್ಯಕ್ಷೆ ಹೂವಮ್ಮ, ಉಪಾಧ್ಯಕ್ಷೆ ಫೈರೋಜಾ ಬಾನು, ಸದಸ್ಯರಾದ ಟಿ.ಎಂ.ಉಮೇಶ್, ಮಹಮ್ಮದ್ ಹನೀಫ್, ರವಿಚಂದ್ರ, ಬಿ.ಕೆ.ಮಧುಸೂದನ್, ಮುರುಗ, ಇಬ್ರಾಹಿಂ ಶಾಫಿ, ಜಾನ್ ಡಿಸೋಜ, ರತ್ನಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್​ಕುಮಾರ್, ಮಹೇಶಾಚಾರ್, ಗುತ್ತಿಗೆದಾರ ಆರ್.ಡಿ.ಮಹೇಂದ್ರ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts