More

    ಕುಸಿಯುತ್ತಿದೆ ಬಿಲ್ಡರ್ ಗಳ ಆಸಕ್ತಿ – ಸೀಮಿತವಾದ ಕೈಗೆಟುಕುವ ಮನೆಗಳು

    ನವದೆಹಲಿ: ಕೈಗೆಟಕುವ ದರದ ವಸತಿ (40 ಲಕ್ಷ ರೂ.ದೊಳಗಿನ) ಯೋಜನೆಗಳ ಬಗ್ಗೆ ಬಿಲ್ಡರ್ ಗಳಲ್ಲಿ ಆಸಕ್ತಿ ಕಡಿಮೆ ಇರುವಂತಿದೆ. ಪ್ರಸಕ್ತ ಸಾಲಿನ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಾಷ್ಟ್ರದ ಪ್ರಮೂಖ ಏಳು ನಗರಗಳಲ್ಲಿ ಕೈಗೆಟಕುವ ಬೆಲೆಯ ಮನೆಗಳ ಲಭ್ಯತೆ ಶೇ.18ಕ್ಕೆ ಸೀಮಿತಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.40ರಷ್ಟಿತ್ತು ಎಂದು ಪ್ರಾಪರ್ಟಿ ಕನ್ಸಲ್​ ಟೆಂಟ್ ಅನರಾಕ್ ತಿಳಿಸಿದೆ.

    2018ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕೊರೊನಾಗೆ ಮುನ್ನ ಕೈಗೆಟಕುವ ಬೆಲೆಯ ಮನೆಗಳ ಪಾಲು ಒಟ್ಟು ಪೂರೈಕೆಯ ಶೇಕಡಾ 42 ರಷ್ಟಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಇದನ್ನೂ ಓದಿ: ಮೆಣಸು ಬೆಳೆದು ಮಾದರಿಯಾದ ರೈತ ಜಯರಾಮಯ್ಯ

    ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,16,220 ಮನೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 40 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 20,920 ಮನೆಗಳಿವೆ. ಆದರೆ, 2018 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೈಗೆಟುಕುವ ಮನೆಗಳ ಪೂರೈಕೆಯು 21,900 ಇತ್ತು.

    ಐಷಾರಾಮಿ ವಸತಿಯತ್ತ ಚಿತ್ತ:
    ಡೆವಲಪರ್‌ಗಳು ಹೆಚ್ಚಿನ ಆದಾಯಕ್ಕಾಗಿ ಐಷಾರಾಮಿ ಯೋಜನೆಗಳತ್ತ ಆಸಕ್ತಿ ವಹಿಸುತ್ತಿದ್ದಾರೆ. ಕಡಿಮೆ ಲಾಭಾಂಶ ಮತ್ತು ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಕೈಗೆಟುಕುವ ಮನೆಗಳು ಲಾಭದಾಯಕವಲ್ಲ ಎಂದು ಭಾವಿಸಿದಂತಿದೆ ಎಂದು ಅನರಾಕ್ ವರದಿ ಹೇಳಿದೆ. ಕಳೆದ ಐದು ವರ್ಷಗಳಲ್ಲಿ ಐಷಾರಾಮಿ ಮನೆಗಳ ಪಾಲು (1.5 ಕೋಟಿ ರೂ.ಗಿಂತ ಹೆಚ್ಚು) ದುಪ್ಪಟ್ಟಾಗಿದೆ ಎಂದು ಅದು ತಿಳಿಸಿದೆ. ಈ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 1,16,200 ಯುನಿಟ್‌ಗಳನ್ನು ಪ್ರಾರಂಭಿಸಿದ್ದು, ಅದರಲ್ಲಿ 27 ಪ್ರತಿಶತ (31,180 ಯುನಿಟ್‌ಗಳು) ಐಷಾರಾಮಿ ವಿಭಾಗದಲ್ಲಿವೆ ಎಂದು ಅದು ಬಹಿರಂಗಪಡಿಸಿದೆ.

    ಐದು ವರ್ಷದ ಅವಧಿಯಲ್ಲಿ ಕಳೆದ ತ್ರೈಮಾಸಿಕದಲ್ಲೇ ಹೆಚ್ಚು ಐಷಾರಾಮಿ ಘಟಕಗಳನ್ನು ಪ್ರಾರಂಭಿಸಲಾಗಿದೆ. 2018 ರಲ್ಲಿ 52ಸಾವಿರದ 120 ಮನೆಗಳನ್ನು ನಿರ್ಮಿಸಿದ್ದು, ಇದರಲ್ಲಿ ಶೇ.9 (4,590) ಐಷಾರಾಮಿ ಮನೆಗಳಿವೆ. ಡೆವಲಪರ್‌ಗಳು ಐಷಾರಾಮಿ ವಸತಿಯತ್ತ ಆಕರ್ಷಿತರಾಗಿದ್ದಾರೆ. ಕರೋನ ನಂತರ ಈ ಬೆಳವಣಿಗೆ ಕಂಡುಬರುತ್ತಿದ್ದು, ಏಳು ನಗರಗಳಲ್ಲಿ ಇವುಗಳ ಮಾರಾಟ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅನರಾಕ್ ಗ್ರೂಪ್ ನ ಪ್ರಾದೇಶಿಕ ನಿರ್ದೇಶಕ ಪ್ರಶಾಂತ್ ಠಾಕೂರ್ ಹೇಳಿದ್ದಾರೆ.

    ಶ್ರೀದೇವಿ ಗ್ಲಾಮರ್​ಗಾಗಿ ಮಾಡಿದ ಆ ಡೈಯಟ್ ಅಷ್ಟು ಡೇಂಜರ್ರಾ? ಆರೋಗ್ಯ ನಿಪುಣರು ಹೇಳುವುದು ಸಹ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts