More

    ಸ್ವಾವಲಂಬಿ ಜೀವನ ಕಟ್ಟಿಕೊಳ್ಳಿ


    ಬಾಗಲಕೋಟೆ: ಆಧುನಿಕ ಕಾಲಘಟ್ಟದಲ್ಲಿ ಕೌಶಲಗಳಿಗೆ ಮನ್ನಣೆ ಇದೆ. ಆದಾಯ ಮೂಲಗಳಾಗಿ ಪರಿವರ್ತನೆಯಾಗಿದ್ದರಿಂದ ನವೀನ ಮಾದರಿ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

    ನವನಗರದ ಬಸವೇಶ್ವರ ಬ್ಯಾಂಕ್ ಕೇಂದ್ರ ಕಚೇರಿ ಸಭಾಭವನದಲ್ಲಿ ಬುಧವಾರ ಬಸವೇಶ್ವರ ಸಹಕಾರಿ ಬ್ಯಾಂಕ, ಸಿರಿ ಸಂಸ್ಕೃತಿಕ ವ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ವನಿತಾ ಲೋಕ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮಹಿಳೆ ಹಾಗೂ ವಿದ್ಯಾರ್ಥಿನಿಯರಿಗಾಗಿ ಉಚಿತ ಕೌಶಲ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ

    ಮಹಿಳೆಯರಿಗೆ ಕೌಶ ತರಬೇತಿ ದೊರಕಿದಲ್ಲಿ ಇಡೀ ಕುಟುಂಬವೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗುತ್ತದೆ. ಹೀಗಾಗಿ ಬಸವೇಶ್ವರ ಬ್ಯಾಂಕ್ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ತನ್ಮೂಲಕ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂದರು.

    ಇಂದು ಬಹಳಷ್ಟು ಮಹಿಳೆಯರು ನಮ್ಮಲ್ಲಿ ವಿವಿಧ ಕೌಶಲ ತರಬೇತಿ ಪಡೆದು ತಮ್ಮ ಮನೆತನದ ನಿರ್ವಹಣೆಗಾಗಿ ಸ್ವಂತ ಉದ್ಯೋಗ ಪ್ರಾರಂಭಿಸಿ ಪ್ರತಿ ತಿಂಗಳು 50-60 ಸಾವಿರ ರೂ.ಗಳನ್ನು ಸಂಪಾದಿಸುವುದು ಸಂತೋಷ ತಂದಿದೆ.

    ಮುಂಬರುವ ದಿನಗಳಲ್ಲಿ ಇನ್ನೂ ಹೊಸ ಹೊಸ ತರಬೇತಿಗಳನ್ನು ಆಯೋಜಿಸುವದರ ಮೂಲಕ ಮಹಿಳೆಯರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸುವ ಮಹತ್ವಾಕಾಂಕ್ಷಿಯನ್ನು ಹೊಂದಿದ್ದೇವೆ. ಬ್ಯಾಂಕಿನಿಂದ ಆರ್ಥಿಕ ಸಹಾಯವನ್ನು ಮಾಡುತ್ತೇವೆ ಎಂದು ಅಭಯ ನೀಡಿದರು.

    ಇದನ್ನೂ ಓದಿ: ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿ

    ಬ್ಯಾಂಕಿನ ನಿರ್ದೇಶಕಿ ಜಯಮ್ಮ ಅಬ್ದುಲಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವೇಶ್ವರ ಬ್ಯಾಂಕ್ ನಿರ್ದೇಶಕರಾದ ಎನ್.ಆರ್.ಕುಲಕರ್ಣಿ, ಶ್ರೀನಿವಾಸ ಬಳ್ಳಾರಿ, ತರಬೇತಿ ಶಿಬಿರದ ತರಬೇತುದಾರರಾದ ರಾಜೇಶ್ವರಿ ಬೋನಗೇರಿ , ವಿಜಯಲಕ್ಷ್ಮೀ ದಿಡ್ಡಿಬಾಗಿಲು, ರಾಜೇಶ್ವರಿ ಅಂಗಡಿ, ಬ್ಯಾಂಕಿನ ಅಧಿಕಾರಿಗಳಾದ ಎಸ್.ಬಿ.ಬದಾಮಿ, ಎಂ.ಎಸ್.ಗುಡಗುಂಟಿ, ಎಸ್.ಎಚ್.ಕುರ್ತಕೋಟಿ, ಐಶ್ವರ್ಯ ತಪಶೆಟ್ಟಿ, ವಿ.ಎಂ.ಹಿರೇಮಠ, ಅರವಿಂದ ಯಲಿಗಾರ ಉಪಸ್ಥಿತರಿದ್ದರು. ದೀಪಾ ಹಡಪದ ಪ್ರಾರ್ಥಿಸಿದರು. ಶಿಲ್ಪಾ ಯರಾಶಿ ನಿರೂಪಿಸಿದರು. ವಹೀದಾಕೌಸರ ಹವಾಲ್ದಾರ ವಂದಿಸಿದರು. ಬಿ.ಜಿ. ಹೊನವಾಡ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts