More

    ಐದು ಗ್ಯಾರಂಟಿಗಳನ್ನು ಜಾರಿಗೊಳ್ಳಿಸಲು ಜನರ ಮೇಲೆ ತೆರಿಗೆ ಹೇರಿದ ಸರಕಾರ: ವಿಪ ಸದಸ್ಯಎಸ್.ವಿ.ಸಂಕನೂರ.

    ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು 32,77,46.62 ಕೋಟಿ ರೂಪಾಯಿಗಳ ಬೃಹತ್ ಪ್ರಮಾಣದ ಜೆಟ್ ಮಂಡಿಸಿ, ಐದು ಗ್ಯಾರಂಟಿಗಳನ್ನು ಜಾರಿಮಾಡುವ ದೃಷ್ಠಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 25ಸಾವಿರಕೋಟಿ, ಸಾರಿಗೆ ಇಲಾಖೆಗೆ 11,500 ಕೋಟಿ, ಅಬಕಾರಿ ಇಲಾಖೆ 36 ಸಾವಿರ ಕೋಟಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 9 ಸಾವಿರ ಕೋಟಿ ರಾಜಸ್ವ ಸಂಗ್ರಹ ಮಾಡುವ ಗುರಿಯನ್ನು ನಿಗಧಿ ಪಡಿಸಿ ಜನರ ಮೇಲೆ ಹೆಚ್ಚಿನ ತೆರಿಗೆಯನ್ನು ಹೆರಿದ್ದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
     ರಾಜ್ಯದ ಬೇರೆ ಬೇರೆ ಇಲಾಖೆಗಳಲ್ಲಿ ಆಗುವ ಸೋರಿಕೆಯನ್ನು ನಿಲ್ಲಿಸಿ, ಅನವಶ್ಯಕ ಖರ್ಚು ನಿಯಂತ್ರಿಸಿ ಜನರ ಮೇಲಿನ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿತ್ತು. ಜನರಿಗೆ ಅಭಿವೃದ್ದಿ ಪರ ಯಾವುದೇ ಯೋಜನೆಗಳನ್ನು ಪ್ರಸ್ತಾಪ ಮಾಡದೇ ಇರುವುದು ದುರದುಷ್ಟಕರ ಸಂಗತಿ. ಮಹಾದಾಯಿ ಯೋಜನೆಗೆ ನಿರ್ದಿಷ್ಟವಾದ ಹಣ ನಿಗದಿಪಡಿಸಿ ಪ್ರಸ್ತಾಪ ಮಾಡದಿರುವುದು ಸಂಶಯಕ್ಕೆ ಕಾರಣವಾಗಿದೆ. ಇದು ಅಲ್ಲದೇ ಖ್ಯಾತ ಅಂತರಾಷ್ಟಿçÃಯ ವಿಜ್ಞಾನಿ ಕಸ್ತೂರಿರಂಗನ್ ಅವರು ದೇಶದ ಎಲ್ಲರಾಜ್ಯಗಳ ಶಿಕ್ಷಣತಜ್ಞರು, ವಿಜ್ಞಾನಿಗಳು, ಉದ್ಯಮಿಗಳು, ಸಾರ್ವಜನಿಕರು, ಸಂಘ-ಸAಸ್ಥೆಗಳಿAದ ಅಭಿಪ್ರಾಯ ಪಡೆದು ಅತ್ಯುತ್ತಮವಾದ ರಾಷ್ಟಿçÃಯ ಶಿಕ್ಷಣ ನೀತಿಯನ್ನು ರೂಪಿಸಿದ್ದನು ಬದಿಗಿಟ್ಟು, ರಾಜ್ಯಕ್ಕೆ ಸಿಮೀತವಾಗಿ ಪ್ರತೇಕವಾದ ಹೊಸ ಶಿಕ್ಷಣ ನೀತಿ ರೂಪಿಸಲಾಗುವುದೆಂದು ಪ್ರಸ್ತಾಪಿಸಿದ್ದನ್ನು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಉಗ್ರವಾಗಿ ಖಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts