More

    ಕೇಂದ್ರ ಬಜೆಟ್​: ಗರ್ಭಕೋಶ ಕ್ಯಾನ್ಸರ್‌ ತಡೆಗೆ ಬಾಲಕಿಯರಿಗೆ ಲಸಿಕೆ

    ನವದೆಹಲಿ: ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 88,956 ಕೋಟಿ ರೂ. ಹಿಂದಿನ ಬಜೆಟ್ ಗೆ ಹೋಲಿಸಿದರೆ 2,350 ಕೋಟಿ ಅಂದರೆ ಶೇ. 2.71ರಷ್ಟು ಹೆಚ್ಚಿಸಲಾಗಿದೆ.

    ಇದನ್ನೂ ಓದಿ:ಚುನಾವಣೆ ಪ್ರೇರಿತ ಅಲ್ಲ, ಅಭಿವೃದ್ಧಿಪರ ಬಜೆಟ್ : ಪ್ರಹ್ಲಾದ ಜೋಶಿ

    2014ರಿಂದ ದೇಶದಲ್ಲಿ 157 ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಈಗ ಈ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸಹ ಸ್ಥಾಪಿಸಲಾಗುವುದು. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಸಹಾಯದಿಂದ ಐಸಿಎಂಆರ್ ಲ್ಯಾಬ್‌ಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

    ಔಷಧೀಯ ವಲಯದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಹಣಕಾಸು ಸಚಿವರು ಹೊಸ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯಿಂದ ಔಷಧ ವಲಯದಲ್ಲಿ ಸಂಶೋಧನೆ ಜತೆಗೆ ಹೂಡಿಕೆಯೂ ಹೆಚ್ಚಲಿದೆ. ಸಿಕಲ್ ಸೆಲ್ ಅನೀಮಿಯಾ ತಪಾಸಣೆ ಮಾಡಲಾಗುವುದು.

    ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಘೋಷಣೆಗಳನ್ನು ಮಾಡಲಾಯಿತು. ಹೆಣ್ಣು ಮಕ್ಕಳ ಗರ್ಭಕೋಶದ ಕ್ಯಾನ್ಸರ್‌ ತಡೆಗಟ್ಟಲು ಕ್ರಮಕೈಗೊಳ್ಳುವುದರ ಜೊತೆಗೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

    ಆರೋಗ್ಯ ಸುಧಾರಣೆಗೆ ಮಾರ್ಗಸೂಚಿಗಳು
    • ಅನೇಕ ಯುವಕರು ವೈದ್ಯರಾಗಿ ಸಾರ್ವಜನಿಕ ಸೇವೆ ಮಾಡಲು ಬಯಸುತ್ತಾರೆ. ಆದ್ದರಿಂದ ಈಗಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುತ್ತೇವೆ. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ನೇಮಿಸಲಾಗುವುದು.
    • 9 – 14 ವರ್ಷ ವಯಸ್ಸಿನ ಹುಡುಗಿಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ತಡೆಗಟ್ಟಲು ವ್ಯಾಕ್ಸಿನೇಷನ್ ಮೇಲೆ ಕೇಂದ್ರೀಕರಿಸಿ ಹೆಣ್ಣು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಂದಿರುವ ‘ಮಿಷನ್ ಇಂದ್ರಧನುಷ್’ ನಾವು ಹೊಸದಾಗಿ ಸ್ಥಾಪಿಸಲಾದ ‘ಯು-ವಿನ್’ ವೇದಿಕೆಯನ್ನು ದೇಶಾದ್ಯಂತ ವಿಸ್ತರಿಸುತ್ತೇವೆ.
    • ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸಲಾಗುತ್ತಿರುವ ಹಣವನ್ನು ನಾವು ಸಮಗ್ರ ಕಾರ್ಯಕ್ರಮದ ಅಡಿಯಲ್ಲಿ ತರುತ್ತೇವೆ.
    • ಸಕ್ಷಂ ಅಂಗನವಾಡಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಆಧುನೀಕರಣ. ಮಕ್ಕಳ ಬೆಳವಣಿಗೆಗೆ ಪೌಷ್ಟಿಕಾಂಶದ ಉತ್ತಮ ವಿತರಣೆಯನ್ನು ಒದಗಿಸಲು ಪೋಶನ್ 20 ಕಾರ್ಯಕ್ರಮವನ್ನು ನವೀಕರಿಸಲಾಗುವುದು.
    • ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣಾ ಯೋಜನೆಯನ್ನು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಿಸಲಾಗುವುದು.
    ಪ್ರಪಂಚದ ಶೇಕಡ 16 ರಷ್ಟು ಮಹಿಳಾ ಜನಸಂಖ್ಯೆಯು ಭಾರತದಲ್ಲಿ ನೆಲೆಸಿದೆ. ಗರ್ಭಕೋಶದ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ನಮ್ಮ ದೇಶದಲ್ಲಿದ್ದಾರೆ ಎಂಬುದು ಗಮನಾರ್ಹ.
    • ಈ ಕಾಯಿಲೆಯಿಂದ ಸಾಯುವವರಲ್ಲಿ ಮೂರನೇ ಒಂದು ಭಾಗದಷ್ಟು ಭಾರತೀಯ ಮಹಿಳೆಯರು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ 80 ಸಾವಿರ ಜನರು ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯಿಂದ 35 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಮದುವೆ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ‘ಅನಿಮಲ್​’ ನಟಿ ತೃಪ್ತಿ ದಿಮ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts