More

    ಬುದ್ಧ ವಿವಿ ಜತೆ ಐಪಿಯುಎ ಒಪ್ಪಂದ

    ಬೆಂಗಳೂರು:  ಕೈಗಾರಿಕೋದ್ಯಮಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸಲು ಇಂಡಿಯನ್ ಪಾಲಿಯುರೆಥೇನ್ ಅಸೋಸಿಯೇಷನ್ (ಐಪಿಯುಎ) ಗ್ರೇಟರ್ ನೊಯಿಡಾದಲ್ಲಿರುವ ಗೌತಮ ಬುದ್ಧ ವಿಶ್ವವಿದ್ಯಾಲಯದ ಸಹಯೋಗ ದೊಂದಿಗೆ ಪಾಲಿಯುರೆಥೇನ್ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ.

    ಉದ್ಯಮಕ್ಕೆ ಅನುಕೂಲವಾಗುವಂತಹ ಅನುಭವಿ ಉದ್ಯೋಗಿಗಳ ಕೊರತೆ ಇದೆ. ಇದನ್ನು ನೀಗಿಸುವ ಉದ್ದೇಶದಿಂದ ಪಾಲಿಯರೆಥೇನ್ ತಂತ್ರಜ್ಞಾನದ ಕುರಿತು ತರಬೇತಿ ನೀಡಲು ಡಿಪ್ಲೊಮಾ ಕೋರ್ಸ್ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಐಪಿಯುಎ ಸಿಸಿಒ ಮಹೇಶ್ ನಾರಾಯಣನ್ ಗೋಪಾಲ ಸಮುದ್ರಂ ತಿಳಿಸಿದರು. ಕೋರ್ಸ್ ಒಂದು ವರ್ಷದ ಅವಧಿ ಯದ್ದಾಗಿದ್ದು, 2 ಸೆಮಿಸ್ಟರ್ ಇರಲಿದೆ. ಪಾಲಿಯರೆಥೇನ್ ಉದ್ಯಮ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಇದು ಉತ್ಪಾದನಾ ವಲಯಕ್ಕೆ ಸಹಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಸ್ ಪರಿಚಯಿಸಿದ್ದೇವೆ. ಐಪಿಯುಎ ಪಠ್ಯಕ್ರಮ, ಪ್ರಯೋಗಾಲಯ ನಿರ್ಮಾಣ ಮಾಡಿಕೊಡಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts