More

    ಕರೊನಾ ತಡೆಗೆ ಅಗ್ನಿಹೋತ್ರ; ರಾಜ್ಯಾದ್ಯಂತ ಕೈಗೊಳ್ಳಲು ಬಿಎಸ್​ವೈ ಸೂಚನೆ

    ಕರೊನಾ ತಡೆಗೆ ಅಗ್ನಿಹೋತ್ರ; ರಾಜ್ಯಾದ್ಯಂತ ಕೈಗೊಳ್ಳಲು ಬಿಎಸ್​ವೈ ಸೂಚನೆ
    ಹುಕ್ಕೇರಿ ಶ್ರೀ

    ಬೆಳಗಾವಿ: ಕರೊನಾ ತಡೆಗಾಗಿ ರಾಜ್ಯಾದ್ಯಂತ ಮಠ ಹಾಗೂ ಮಂದಿರಗಳಲ್ಲಿ ಅಗ್ನಿಹೋತ್ರ ಹೋಮ ಕೈಗೊಳ್ಳಲು ಆದೇಶಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಗುರುವಾರ ನಗರದ ಹುಕ್ಕೇರಿ ಹಿರೇಮಠದಲ್ಲಿ ಜಿಲ್ಲೆಯ 80ಕ್ಕೂ ಅಧಿಕ ಮಠಾಧೀಶರು ಆಯೋಜಿಸಿದ್ದ ಅಗ್ನಿಹೋತ್ರ, ಧನ್ವಂತರಿ, ಸುದರ್ಶನ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಗ್ನಿಹೋತ್ರ ಮಾಡುವುದರಿಂದ ಕರೊನಾ ದೂರ ಮಾಡಬಹುದು ಎಂದು ಹುಕ್ಕೇರಿ ಹಿರೇಮಠದ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಮುಖಾಂತರ ಮಠ, ಮಂದಿರಗಳಲ್ಲಿ ಅಗ್ನಿಹೋತ್ರ ಮಾಡಿಸಲು ಸೂಚನೆ ನೀಡಬೇಕೆಂಬ ಅವರ ಸಲಹೆ ಪರಿಗಣಿಸಲಾಗುವುದು. ಕರೊನಾದಿಂದ ಜನರನ್ನು ಮುಕ್ತರನ್ನಾಗಿ ಮಾಡಲು ಎಲ್ಲ ಮಠಾಧೀಶರು ಆಶೀರ್ವದಿಸಬೇಕು. ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದರು.

    ಅಗ್ನಿಹೋತ್ರ ಶುದ್ಧಮಂತ್ರ: ನಿತ್ಯ ಸೂರ್ಯೋದಯ, ಸೂರ್ಯಾಸ್ತದ ಸಮಯದಲ್ಲಿ ‘ಅಗ್ನಿಹೋತ್ರ’ ಮಾಡುವುದರಿಂದ ರೋಗಾಣು ನಾಶವಾಗಿ 1 ಕಿ.ಮೀನಷ್ಟು ದೂರದ ವಾತಾವರಣ ಶುದ್ಧಿಯಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಅಗ್ನಿಹೋತ್ರ ಮಾಡಲು ಪಿರಮಿಡ್ ಆಕೃತಿಯ ಒಂದು ತಾಮ್ರದ ಪಾತ್ರೆ, ಮುಕ್ಕಾಗದ ಹಾಗೂ ಪಾಲಿಶ್ ಮಾಡದ ಅಕ್ಕಿ, ಹಸುವಿನ ಶುದ್ಧ ತುಪ್ಪ ಬೇಕಾಗುತ್ತದೆ. ಇದನ್ನು ದಹಿಸುವುದರಿಂದ ಆ ವ್ಯಕ್ತಿಯ 10 ಅಡಿ ಸುತ್ತಮುತ್ತ, ಮೇಲೆ-ಕೆಳಗೆ ಋಣಾತ್ಮಕ ಅಂಶ ಹಾಗೂ ಯಾವುದೇ ಪ್ರಕಾರದ ಕೆಟ್ಟ ರೋಗಾಣುಗಳಿದ್ದರೂ ನಾಶ ಮಾಡುವ ಶಕ್ತಿ ಅಗ್ನಿಹೋತ್ರದಿಂದ ಬರುವ ಧೂಮ (ಹೊಗೆ)ಕ್ಕೆ ಇರುತ್ತದೆ. ಈ ಅಗ್ನಿಹೋತ್ರವನ್ನು ರಾಜ್ಯಾದ್ಯಂತ ಮಾಡುವುದರಿಂದ ಕರೊನಾದಂತಹ ಸೋಂಕನ್ನೂ ತಡೆಯಬಹುದಾಗಿದೆ. ದೇಶವ್ಯಾಪಿ ಕರೊನಾ ನಿಯಂತ್ರಣಕ್ಕೆ ಅಗ್ನಿಹೋತ್ರ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ವಹಿಸಿದ್ದೇನೆ ಎಂದು ಶ್ರೀಗಳು ತಿಳಿಸಿದರು.

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಬೆಚ್ಚಿಬೀಳಿಸುವಂತಿದೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಪ್ರಮಾಣ!; ಇಂದು ಇದುವರೆಗಿನ ಗರಿಷ್ಠ ಪ್ರಕರಣ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts