More

    ಬೆಂಗಳೂರು ಉಪನಗರ ರೈಲ್ವೆ ಯೋಜನೆ; ಕನಕ ಮಾರ್ಗದ ಕಾಮಗಾರಿ ಗುತ್ತಿಗೆ ಪ್ರಕ್ರಿಯೆ ಪೂರ್ಣ

    ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆ(ಕೆ-ರೈಡ್​) ಕಾರಿಡಾರ್​-4ರ ಸಿವಿಲ್​ ನಿರ್ಮಾಣ ಕಾಮಗಾರಿಯ ಟೆಂಡರ್​ನ್ನು ಲಾರ್ಸನ್‌ ಆ್ಯಂಡ್‌ ಟೂಬ್ರೊ(ಎಲ್​ ಆ್ಯಂಡ್​ ಟಿ) ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಕಾಮಗಾರಿ ವಿನ್ಯಾಸ ಮತ್ತು ನಿರ್ಮಾಣ ಒಪ್ಪಂದ ಮೊತ್ತವು 1040.51 ಕೋಟಿ ರೂ. ಆಗಿದ್ದು, 30 ತಿಂಗಳ ಗುತ್ತಿಗೆ ಅವಧಿ ಹೊಂದಿದೆ. ಕಾರಿಡಾರ್-4 ಕನಕ ಮಾರ್ಗವು ಇಪಿಸಿ ಮಾದರಿಯಲ್ಲಿ ಹೀಲಲಿಗೆಯಿಂದ ರಾಜಾನುಕುಂಟೆ ವರೆಗೆ 48 ಕಿ.ಮೀ ಉದ್ದವಿದ್ದು, 8.9 ಕಿ.ಮೀ ಎತ್ತರಿಸಿದ ವಿಭಾಗ ಹಾಗೂ 37.9 ಕಿ.ಮೀ(ನಿಲ್ದಾಣ ಕಟ್ಟಡಗಳನ್ನು ಹೊರತುಪಡಿಸಿ) ಸಮತಲ ವಿಭಾಗಗಳನ್ನು ಒಳಗೊಂಡಿದೆ.

    ನಿರ್ಮಾಣ ಕಾಮಗಾರಿಯ ಒಪ್ಪಂದವು ಯಲಹಂಕದ ಬಳಿ (ಬಿಎಸ್​ಆರ್​ಪಿ) ಕಾರಿಡಾರ್​-1 ಮತ್ತು ಕಾರಿಡಾರ್​-4ಗಾಗಿ 1.2 ಕಿ.ಮೀ ಉದ್ದದ ಡಬಲ್​ ಡೆಕ್ಕರ್​ ಜೋಡಣೆಯ ನಿರ್ಮಾಣವನ್ನು ಒಳಗೊಂಡಿದೆ. ಜತೆಗೆ ಬೆನ್ನಿಗಾನಹಳ್ಳಿ ಬಳಿ ಬಿಎಂಆರ್​ಸಿಎಲ್​ ವಾಯಡಕ್ಟ್​ನ ಕೆಳಗೆ 500 ಮೀ. ಉದ್ದದ ಬಿಎಸ್​ಆರ್​ಪಿ ಎತ್ತರಿಸಿದ ವಿಭಾಗ ನಿರ್ಮಾಣವನ್ನು ಹೊಂದಿದೆ. ಇದು ಬಿಎಸ್​ಆರ್​ಪಿ ಮತ್ತು ಬಿ ಎಂಆರ್​ಸಿಎಲ್​ ನಡುವೆ ಸಮಮಾರ್ಗವನ್ನು ಹಂಚಿಕೊಳ್ಳುತ್ತದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

    ಈ ಹಿಂದೆ, ಕಾರಿಡಾರ್-2 (ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿಗೆ 25.2 ಕಿಮೀ) ಕಾಮಗಾರಿಯನ್ನು ಕೂಡ ಎಲ್​ ಆ್ಯಂಡ್​ ಟಿ ಕಂಪೆನಿ ನಿರ್ವಹಿಸುತ್ತಿದ್ದು, ಪ್ರಗತಿ ಕಾರ್ಯವು ಭರದಿಂದ ಸಾಗುತ್ತಿದೆ. ಪ್ರಸ್ತುತ ಟೆಂಡರ್​ನೊಂದಿಗೆ ಬಿಎಸ್​ಆರ್​ಪಿಗಾಗಿ ಒಟ್ಟು 72.08 ಕಿ.ಮೀ ಉದ್ದದ ಸಿವಿಲ್​ ಕೆಲಸ (ಎತ್ತರಿಸಿದ ಮತ್ತು ಸಮತಲ ವಿಭಾಗ) ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts