More

    ಬಿಎಸ್‌ಎನ್‌ಎಲ್‌ನಲ್ಲಿ ಟ್ರೇನಿ ಹುದ್ದೆಗಳು; ಯಾವ ಸ್ಟ್ರೀಮ್‌ನಲ್ಲಿ ಎಷ್ಟು?

    ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಕೇಂದ್ರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿದ್ದು, ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

    ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಎಸ್‌ಎನ್‌ಎಲ್ 2000 ಸೆಪ್ಟೆಂಬರ್ 15ರಂದು ಅಸ್ತಿತ್ವಕ್ಕೆ ಬಂದಿತು. ಪ್ರಸ್ತುತ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗಳ ನೇಮಕಾತಿಗೆ ಬಿಎಸ್‌ಎನ್‌ಎಲ್ ಮುಂದಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಅವಧಿಯನ್ನು ಮುಂಬರುವ ದಿನಗಳಲ್ಲಿ ನವೀಕರಿಸುವ ಸಾಧ್ಯತೆ ಇದ್ದು, ಆಗಾಗ ಸಂಸ್ಥೆಯ ಜಾಲತಾಣವನ್ನು ಪರಿಶೀಲಿಸಬಹುದು.

    ಒಟ್ಟು ಹುದ್ದೆಗಳು-558

    ಯಾವ ಸ್ಟ್ರೀಮ್‌ನಲ್ಲಿ ಎಷ್ಟು ಹುದ್ದೆ?
    ಟೆಲಿಕಾಂ ಆಪ್‌ರೇಷನ್ಸ್ 450
    ಸಿವಿಲ್ 13
    ಹಣಕಾಸು 84
    ಎಲೆಕ್ಟ್ರಿಕಲ್ 11

    ವಿದ್ಯಾರ್ಹತೆ
    ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಇಇಇ/ಇಸಿಇ/ಸಿಎಸ್‌ಇ/ಐಟಿ ಅಥವಾ ಇನ್ಸ್​​​​ಟ್ರುಮೆಂಟೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ, ಬಿ.ಟೆಕ್ ಪೂರ್ಣಗೊಳಿಸಿದವರು ಟೆಲಿಕಾಂ ಆಪ್‌ರೇಷನ್ಸ್ ಸ್ಟ್ರೀಮ್‌ನಲ್ಲಿ ಕೆಲಸ ಮಾಡಲು ಅರ್ಹರು. ಹಣಕಾಸು ವಿಭಾಗಕ್ಕೆ ಸಿಎ, ಸಿಎಂಎ ಅರ್ಹತೆ ನಿಗದಿಪಡಿಸಿದ್ದು, ಸಿವಿಲ್‌ನಲ್ಲಿ ಸೇವೆ ಸಲ್ಲಿಸಲು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿಇ, ಬಿ.ಟೆಕ್ ಪದವಿ ಪಡೆದಿರಬೇಕು. ಎಲೆಕ್ಟ್ರಿಕಲ್ ಇಂಜಿನಿಯರ್ ಪೂರ್ಣಗೊಳಿಸಿದವರು ಎಲೆಕ್ಟ್ರಿಕಲ್ ಸ್ಟ್ರೀಮ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

    ವೇತನ, ವಯೋಮಿತಿ
    ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ ಪಾವತಿಸಲಾಗುತ್ತದೆ. 24,900 ರೂ.ನಿಂದ 50,500 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಯಾವುದೇ ಸ್ಟ್ರೀಮ್‌ಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಬಿಎಸ್‌ಎನ್‌ಎಲ್ ಅಧಿಕೃತ https://bsnl.co.in/ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಜತೆಗೆ ಇತ್ತೀಚಿನ ಭಾವಚಿತ್ರವನ್ನು ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಬೇಕು. ಸಂವಹನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 31-03-2024

    ಹೆಚ್ಚಿನ ಮಾಹಿತಿಗಾಗಿ:https://bsnl.co.in/

    ಭೂಮಾಪಕರ ಹುದ್ದೆ ಭರ್ತಿಗೆ ಅರ್ಜಿ; ಕೆಪಿಎಸ್‌ಸಿಯಿಂದ ಅಧಿಸೂಚನೆ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts