More

    ಬಿಎಸ್​​ಎನ್​ಎಲ್​ : ಹೊಸ ಪ್ರೀಪೇಯ್ಡ್​ ಗ್ರಾಹಕರಿಗೆ ಆಕರ್ಷಕ ಸೌಲಭ್ಯ

    ನವದೆಹಲಿ: ಪ್ರೀಪೇಯ್ಡ್​ ಮೊಬೈಲ್​ ಕನೆಕ್ಷನ್​ ಬಯಸುವವರಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಶುಭ ಸುದ್ದಿ ನೀಡಿದೆ. ಮೊಬೈಲ್ ಕನೆಕ್ಷನ್ ಪಡೆಯುವ ಹೊಸ ಗ್ರಾಹಕರಿಗೆ 249 ರೂ.ಗಳ ಫಸ್ಟ್ ರೀಚಾರ್ಜ್​ ಕೂಪನ್​ (ಎಫ್​ಆರ್​​ಸಿ) ಅನ್ನು ಬಿಡುಗಡೆ ಮಾಡಿದೆ. 2021ರ ಮಾರ್ಚ್​ 31 ರವರೆಗೆ ಲಭ್ಯವಿರುವ ಈ ಕೂಪನ್, ಪ್ರತಿಸ್ಪರ್ಧಿಗಳಾದ ಏರ್​ಟೆಲ್​ ಮತ್ತು ಜಿಯೋ ನೀಡುತ್ತಿರುವ ಯೋಜನೆಗಳಿಗೆ ಸಮನಾದ ಸೌಲಭ್ಯಗಳನ್ನು ನೀಡಲಿದೆ ಎನ್ನಲಾಗಿದೆ.

    ಕೇರಳ ಟೆಲಿಕಾಮ್​ ನೀಡಿರುವ ಮಾಹಿತಿಯ ಪ್ರಕಾರ ಹೊಸ ಗ್ರಾಹಕರು, ಈ ಎಫ್​ಆರ್​ಸಿ ಕೆಳಗೆ 249 ರೂಪಾಯಿ ಕೊಟ್ಟು ರೀಚಾರ್ಜ್​ ಮಾಡಿಸಿದಲ್ಲಿ, ಅರವತ್ತು ದಿನಗಳವರೆಗೆ ಅನಿಯಮಿತ ಡೇಟಾ ಮತ್ತು ಅನಿಯಮಿತ ವಾಯ್ಸ್​​ ಕಾಲ್​ಗಳ ಸೌಲಭ್ಯವಿದೆ. ದಿನಕ್ಕೆ 100 ಎಸ್​ಎಂಎಸ್​ಗಳ ಸೌಲಭ್ಯ ಕೂಡ ಇದೆ. ಡೇಟಾ ಅನಿಯಮಿತವಾಗಿದ್ದರೂ ದಿನಕ್ಕೆ 2 ಜಿಬಿ ಡೇಟಾ ಬಾಬತ್ತು ಮುಗಿದ ನಂತರ ವೇಗವು ಸೆಕೆಂಡ್​ಗೆ 40 ಕೆಬಿಗೆ ಮಾರ್ಪಾಡಾಗುತ್ತದೆ. ​ಅನಿಯಮಿತ ಕಾಲ್​ಗಳ ಸೌಲಭ್ಯದಲ್ಲಿ ಯಾವುದೇ ನೆಟ್ವರ್ಕ್​ಗೆ ಮಾಡುವ ಸ್ಥಳೀಯ, ಎಸ್​ಟಿಡಿ ಮತ್ತು ರೋಮಿಂಗ್ ಕರೆಗಳು ಉಚಿತವಾಗಿರುತ್ತವೆ.

    ಇದನ್ನೂ ಓದಿ: ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!

    ಈ ಮಾರ್ಚ್ 31 ರವರೆಗೆ ಲಭ್ಯವಿರುವ ಈ ಸೀಮಿತ ಅವಧಿಯ ಯೋಜನೆಯ ವಿಶೇಷ ಆಕರ್ಷಣೆಯೆಂದರೆ, ಬಿಎಸ್‌ಎನ್‌ಎಲ್, ಪ್ರತಿ ಹೊಸ ಸಂಪರ್ಕಕ್ಕಾಗಿ ತನ್ನ ನೇರ ಮಾರಾಟದ ಏಜೆಂಟರಿಗೆ 224 ರೂ.ಗಳನ್ನು ನೀಡಲಿದೆ. ಈ ಮೂಲಕ ಬಿಎಸ್​ಎನ್​ಎಲ್​ ತನ್ನೆಡೆಗೆ ಹೊಸ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

    ಇದರೊಂದಿಗೆ ತನ್ನ ಎಫ್​ಟಿಟಿಹೆಚ್​​ ಬ್ರಾಡ್​ಬ್ಯಾಂಡ್​ ಪ್ಲಾನ್​ಗಳನ್ನು ನವೀಕರಿಸಿ, ಅದೇ ಹಳೇ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಅಧಿಕ ವೇಗದ ಸೌಲಭ್ಯ ನೀಡಲು ಬಿಎಸ್​​ಎನ್​ಎಲ್​ ಮುಂದಾಗಿದೆ. ಈ ಪ್ಲಾನ್​ಗಳು 777 ರೂ.ಗಳಿಂದ ಆರಂಭವಾಗಲಿದ್ದು, ಅಂಡಮಾನ್ ಮತ್ತು ನಿಕೋಬಾರ್​ ಸರ್ಕಲ್​ಗಳನ್ನು ಬಿಟ್ಟು ಬೇರೆಲ್ಲಾ ಟೆಲಿಕಾಂ ಸರ್ಕಲ್​ಗಳಲ್ಲಿ ನಿಯಮಿತವಾಗಿ ಲಭ್ಯವಾಗಲಿವೆ. ಮಾರ್ಚ್​ 31 ರವರೆಗೆ ಈ ಎಫ್​ಟಿಟಿಹೆಚ್ ಪ್ಲಾನ್​ಗಳ ಅಳವಡಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !

    ಮನೆ ಮುಂದೆ ಕಸ ಹಾಕಿದ್ದಕ್ಕೆ ಜಗಳ : 11 ವರ್ಷದ ಬಾಲಕಿ ಆತ್ಮಹತ್ಯೆ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts