More

    ಉಗ್ರರು ಒಳನುಸುಳುವಿಕೆಗೆ ಬಳಸುತ್ತಿದ್ದ ಭೂಗತ ಸುರಂಗ ಪತ್ತೆ! ಹತ್ತೇ ದಿನದಲ್ಲಿ ಪತ್ತೆಯಾದ 2ನೇ ಸುರಂಗ

    ಶ್ರೀನಗರ: ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನದ ಉಗ್ರರು ಭಾರತದೊಳಗೆ ನುಸುಳಲು ಬಳಸಿಕೊಳ್ಳುತ್ತಿದ್ದ ಭೂಗತ ಸುರಂಗವೊಂದನ್ನು ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್​ಎಫ್​) ಯೋಧರು ಪತ್ತೆ ಹಚ್ಚಿದ್ದಾರೆ. ಹತ್ತು ದಿನಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಇದಾಗಿದೆ.

    ಇದನ್ನೂ ಓದಿ: ಹಾಡಹಗಲೇ ಲೂಟಿ, ಸಿಬ್ಬಂದಿ ಕಟ್ಟಿಹಾಕಿ ಚಿನ್ನಾಭರಣ ದರೋಡೆ, ಮುಸುಕುಧಾರಿಗಳ ಕೃತ್ಯ

    ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸುರಂಗ ಪತ್ತೆಯಾಗಿದೆ. ಹಿರಾನಗರ ಸೆಕ್ಟರ್​ನ ಗಡಿ ಹೊರಠಾಣೆ ಪನ್ಸಾರ್ ಪ್ರದೇಶದಲ್ಲಿರುವ ಈ ಸುರಂಗವು ಸುಮಾರು 150 ಮೀಟರ್​ ಉದ್ದವಿದೆ ಎನ್ನಲಾಗಿದೆ. 30 ಅಡಿಯಷ್ಟು ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ. ಸದ್ಯ ಭದ್ರತಾ ಪಡೆಯ ಸಿಬ್ಬಂದಿ ಸುತ್ತಲೂ ಸುತ್ತುವರಿದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಇದನ್ನೂ ಓದಿ: ಲಾಂಗ್ ತೋರಿಸಿ ದೋಚುತ್ತಿದ್ದವರ ಬಂಧನ, ಕೇಂದ್ರ ವಲಯ ನೂತನ ಐಜಿಪಿ ಎಂ.ಚಂದ್ರಶೇಖರ್ ಮಾಹಿತಿ

    ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಕಳೆದ ಆರು ತಿಂಗಳಲ್ಲಿ ಪತ್ತೆಯಾದ ನಾಲ್ಕನೇ ಸುರಂಗ ಇದಾಗಿದೆ. ಕಳೆದ 10 ವರ್ಷಗಳಲ್ಲಿ ಈ ರೀತಿಯ 10 ಸುರಂಗಗಳನ್ನು ಪತ್ತೆ ಹಚ್ಚಲಾಗಿದೆ. ಈ ಹಿಂದೆ ಜನವರಿ 13ರಂದು ಅದೇ ವಲಯದ ಬೊಬಿಯಾನ್ ಗ್ರಾಮದಲ್ಲಿ 150 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು. (ಏಜೆನ್ಸೀಸ್​)

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts