More

    ರಾಜಸ್ಥಾನದಲ್ಲಿ ಒಳನುಸಳಲು ಯತ್ನಿಸಿದ ಪಾಕಿಸ್ತಾನಿಯ ಹತ್ಯೆ

    ನವದೆಹಲಿ: ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್​ನಿಂದ ಒಳನುಸುಳಲು ಸಾಕಷ್ಟು ಜನರು ಪ್ರಯತ್ನಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಈ ಹಾವಳಿ ಹೆಚ್ಚಾಗಿದ್ದರೂ, ಇದೇ ಮೊದಲ ಬಾರಿಗೆ ರಾತ್ರಿ ವೇಳೆ ರಾಜಸ್ಥಾನದ ಮರಳುಗಾಡಿನ ಮೂಲಕ ಭಾರತದೊಳಗೆ ನುಸುಳಲು ಯತ್ನಿಸಿದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಸಿಬ್ಬಂದಿ ಹತ್ಯೆ ಮಾಡಿದ್ದಾರೆ.

    ರಾಜಸ್ಥಾನದ ಬಾರ್ಮರ್​ ಜಿಲ್ಲೆಯನ್ನು ಹಾದುಹೋಗಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ರಾತ್ರಿ ವೇಳೆ ನುಸುಳುಕೋರನೊಬ್ಬ ಭಾರತದೊಳಗೆ ನುಸುಳಲು ಯತ್ನಿಸಿದ್ದ. ಇದನ್ನು ಗಮನಿಸಿದ ಬಿಎಸ್​ಎಫ್​ ಯೋಧರು ಆತನೆಡೆಗೆ ಗುಂಡು ಹಾರಿಸಿ, ಬೆದರಿಸಿ ವಾಪಸು ಕಳುಹಿಸಲು ಪ್ರಯತ್ನಿಸಿದ್ದರು. ಆದರೂ ಆತ ಗಡಿಬೇಲಿಯನ್ನು ದಾಟಿಕೊಂಡು ಭಾರತದೆಡೆಗೆ ಓಡಿ ಬಂದಿದ್ದ. ಈ ಸಂದರ್ಭದಲ್ಲಿ ಆತನ ಮೇಲೆ ಗುಂಡಿನ ದಾಳಿ ಮಾಡಲಾಯಿತಾದರೂ ಆತ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಬೆಳಗ್ಗೆ ಹೋಗಿ ನೋಡಿದಾಗ ಆತ ಪೊದೆಯಲ್ಲಿ ಸತ್ತು ಬಿದ್ದಿದ್ದ ಎಂದು ಬಿಎಸ್​ಎಫ್​ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ವಾರದಲ್ಲಿ ಅಮೆರಿಕ, ಬ್ರೆಜಿಲ್​ ಮೀರಿಸಿದ ಭಾರತ; ಹೊಸ ಕರೊನಾ ಕೇಸ್​ಗಳಿಗೆ ಬೀಳುತ್ತಿಲ್ಲ ಕಡಿವಾಣ

    ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್​ಎಫ್​ ಬಿಗಿಯಾದ ಪಹರೆಯನ್ನು ಏರ್ಪಡಿಸುತ್ತದೆ. ಶುಕ್ರವಾರ ತಡರಾತ್ರಿಯಲ್ಲಿ ಪಾಕಿಸ್ತಾನದ ಕಡೆಯಲ್ಲಿ 10ರಿಂದ 15 ಟಾರ್ಚ್​ಗಳು ಬೆಳಗುವುದು ಕಂಡುಬಂದಿತು. ಇದರ ಬೆನ್ನಲ್ಲೇ ಒಂದಷ್ಟು ಕೂಗಾಟವೂ ಕೇಳಿಸಿತು. ಇದಾದ ಬಳಿಕ ವ್ಯಕ್ತಿಯೊಬ್ಬ ಭಾರತದ ಗಡಿ ಭಾಗದಲ್ಲಿ ಅಳವಡಿಸಿರುವ ಬೇಲಿಯನ್ನು ಮುರಿದು ದಾಟಲು ಮುಂದಾದ. ಈ ಮಾರ್ಗದಲ್ಲಿ, ರಾತ್ರಿ ವೇಳೆ ಭಾರತದೊಳಗೆ ನುಸುಳಲು ಪಾಕ್​ನವರು ಮಾಡಿದ ಮೊದಲ ಪ್ರಯತ್ನ ಇದು ಎಂದು ಬಿಎಸ್​ಎಫ್​ ಅಧಿಕಾರಿಗಳು ಹೇಳಿದ್ದಾರೆ.

    ಮುಂದಿನ ಶನಿವಾರ ರಾಷ್ಟ್ರಾದ್ಯಂತ ಸ್ವಾತಂತ್ರ್ಯ ದಿನೋತ್ಸವ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಭಾರತದೊಳಗೆ ನುಸಳಬಹುದು ಎಂಬ ಕಾರಣಕ್ಕಾಗಿ ಭಾರತ-ಪಾಕ್​ ಗಡಿಯುದ್ದಕ್ಕೂ ಭಾರತೀಯ ಸೇನಾಪಡೆ ಬಿಗಿಪಹರೆ ಏರ್ಪಡಿಸಿದೆ.

    ಅಂಗವಿಕಲೆಯ 10ನೇ ತರಗತಿ ಅಂಕಪಟ್ಟಿಯಲ್ಲಿ 2 ಅಂಕಗಳು 100 ಅಂಕಗಳಾದಾಗ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts