More

    ಜಮ್ಮುವಿನ ಅರ್ನಿಯಾ ಸೆಕ್ಟರ್​ನಲ್ಲಿ ಡ್ರೋನ್​ ಪತ್ತೆ: ಬಿಎಸ್​ಎಫ್​ ಯೋಧರ ಗುಂಡಿನ ದಾಳಿಗೆ ಡ್ರೋನ್​ ಕಣ್ಮರೆ

    ಶ್ರೀನಗರ: ಜಮ್ಮುವಿನ ಅರ್ನಿಯಾ ವಲಯದ ಅಂತಾರಾಷ್ಟ್ರೀಯ ಗಡಿ ಬಳಿಯಲ್ಲಿ ಮಂಗಳವಾರ ತಡರಾತ್ರಿ ಡ್ರೋನ್​ ಪತ್ತೆಯಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯ ಯೋಧರು ಅದರತ್ತ ಗುಂಡಿನ ದಾಳಿ ನಡೆಸಿದ್ದಾರೆ.

    ಬಿಎಸ್​ಎಫ್​ ಯೋಧರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಡ್ರೋನ್ ಕಣ್ಮರೆಯಾಯಿತು. ಅದರ ಆಪರೇಟರ್​ಗಳು ಅದನ್ನು ಪಾಕಿಸ್ತಾನದ ಕಡೆಗೆ ಎಳೆದುಕೊಂಡಿರುವುದಾಗಿ ವರದಿಯಾಗಿದೆ.

    ಜುಲೈ 13-14ರ ಮಧ್ಯರಾತ್ರಿ ಅರ್ನಿಯಾ ಸೆಕ್ಟರ್​ನ ನಮ್ಮ ಗಡಿಯಿಂದ 200 ಮೀಟರ್ ಒಳಗೆ​ ರೆಡ್​ಲೈಟ್​ ಬ್ಲಿಂಕ್​ ಆಗುತ್ತಿರುವುದನ್ನು ನಮ್ಮ ಯೋಧರು ಪತ್ತೆಹಚ್ಚಿದರು. ತಕ್ಷಣ ಎಚ್ಚೆತ್ತ ಯೋಧರು ಅದರತ್ತ ಗುಂಡಿನ ದಾಳಿ ಮಾಡಿದರು. ತಕ್ಷಣ ಡ್ರೋನ್​ ಕಣ್ಮರೆಯಾಯಿತು. ಸ್ಥಳವನ್ನು ಶೋಧಿಸಿದಾಗ ಏನೂ ಕೂಡ ಪತ್ತೆಯಾಗಲಿಲ್ಲ ಎಂದು ಬಿಎಸ್​ಎಫ್​ ಪತ್ರಿಕಾ ಹೇಳಿಕೆಯನ್ನು ನೀಡಿದೆ.

    ದೇಶದ ಪ್ರಮುಖ ಸ್ಥಾಪನೆಗಳನ್ನು ನಾಶಮಾಡಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಡ್ರೋನ್‌ ಬಳಸುವ ಹೊಸ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಅದರ ಭಾಗವಾಗಿ ಜೂನ್ 27ರ ಮುಂಜಾನೆ ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಮೊದಲು ಬಾರಿಗೆ ಎರಡು ಬಾಂಬ್‌ಗಳನ್ನು ಡ್ರೋನ್​ ಮೂಲಕ ಸಿಡಿಸಲಾಯಿತು. ಇದರಿಂದ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಜೂನ್​ 27ರ ಮುಂಜಾನೆ 1.40ರ ಸುಮಾರಿಗೆ ಆರು ನಿಮಿಷಗಳ ಅಂತರದಲ್ಲಿ ಸ್ಫೋಟಗಳು ನಡೆದವು. ಮೊದಲ ಸ್ಫೋಟವು ಜಮ್ಮುವಿನ ಹೊರವಲಯದ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿರುವ ಒಂದೇ ಅಂತಸ್ತಿನ ಕಟ್ಟಡದ ಮೇಲ್ಛಾವಣಿಯನ್ನು ಧ್ವಂಸ ಮಾಡಿದೆ. ಎರಡನೆಯದು ನೆಲದ ಮೇಲೆ ಬಿದ್ದಿದೆ.

    ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಂಬನ್ ಮತ್ತು ಬಾರಾಮುಲ್ಲಾದ ಜಿಲ್ಲಾ ಅಧಿಕಾರಿಗಳು, ಡ್ರೋನ್‌ಗಳು ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಇಟ್ಟುಕೊಳ್ಳುವುದನ್ನು ನಿಷೇಧಿಸಿದ್ದಾರೆ. (ಏಜೆನ್ಸೀಸ್​)

    ಡಿಜಿಟಲ್ ಸ್ಕಿಲ್ ಚಾಂಪಿಯನ್ ಆಗ್ತೀರಾ?; ಡಿಜಿಟಲ್ ಕೌಶಲ ಇದ್ದವರಷ್ಟೇ ಇಲ್ಲಿ ಸಾಕ್ಷರರು

    ಸೈಬರ್ ಕಳ್ಳರ ಜಾಲಕ್ಕೆ ಸಿಲುಕುವಿರಿ ಜೋಕೆ!; ಬಲೆಗೆ ಸಿಕ್ಕರೆ ಹೆದರದೆ ಎದುರಿಸಿ

    ಸೌರವ್ ಆಗ್ತಾರೆ ರಣಬೀರ್; ಕ್ರಿಕೆಟಿಗ ಗಂಗೂಲಿ ಬಯೋಪಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts