More

    ಹೈದರಾಬಾದ್​: ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕವಿತಾ ಬಂಧನ

    ಹೈದರಾಬಾದ್​​/ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು ಅವರನ್ನು ದೆಹಲಿಗೆ ಕರೆತರಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಇಡಿ, ಐಟಿಗಳ ಮೂಲಕ ಬೆದರಿಕೆ ಒಡ್ಡಿ ಬಿಜೆಪಿ ದೇಣಿಗೆ ಸಂಗ್ರಹ: ಮಲ್ಲಿಕಾರ್ಜುನ್​ ಖರ್ಗೆ ಆರೋಪ

    ಹೈದರಾಬಾದ್​ನಲ್ಲಿ ಕೆ.ಕವಿತಾ ಅವರನ್ನು ಬಂಧಿಸಿದ್ದ ಬಿಜೆಪಿ ವಿರುದ್ಧ ಬಿಆರ್​ಎಸ್​ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಹೈದರಾಬಾದ್ ಉಪನಗರ ಮಲ್ಕಾಜ್‌ಗಿರಿಯಲ್ಲಿ ರೋಡ್‌ಶೋ ನಡೆಸಲಿದ್ದಾರೆ.

    ಜಾರಿ ನಿರ್ದೇಶನಾಲಯ ದಾಳಿ: ಮೂಲಗಳ ಪ್ರಕಾರ ಕವಿತಾ ಅವರನ್ನು ಇಡಿ ದೆಹಲಿಗೆ ಕರೆತರುತ್ತಿದೆ. ಬಂಧನಕ್ಕೆ ಮುನ್ನ ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.  ಏಜೆನ್ಸಿ ನೀಡಿದ ಹಲವಾರು ಸಮನ್ಸ್‌ಗಳಿಗೆ ಗೈರು ಹಾಜರಾದ ನಂತರ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಆರ್​ಎಸ್​ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಇಡಿ ವಿರುದ್ಧ ಧಿಕ್ಕಾರ ಕೂಗಿದರು. ಆರೋಪಿ ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು ಎರಡು ಸಮನ್ಸ್‌ಗಳಿಗೆ ಹಾಜರಾಗಿರಲಿಲ್ಲ.

    ಕವಿತಾ ಅವರನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಹೇಳುತ್ತಿಲ್ಲ ಎಂದು ಬಿಆರ್​ಎಸ್​ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೋಮ ಭರತ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗ, ಚುನಾವಣೆಗೂ ಮುನ್ನ ನಡೆದ ಬಂಧನ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

    ಬಂಧನದ ವಿಷಯ ತಿಳಿದ ಮಾಜಿ ಸಚಿವ ಮತ್ತು ಕವಿತಾ ಸಹೋದರ ಕೆಟಿಆರ್ ಮತ್ತು ಹರೀಶ್​ ರಾವ್​ ಅವರು ಕವಿತಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ.
    ಇಡಿ ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಸಿಆರ್ ಮತ್ತು ಬಿಆರ್​ಎಸ್​ ಪಕ್ಷವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಲೋಕಸಭೆ ಚುನಾವಣಾ ವೇಳೆ ನಮ್ಮ ಪಕ್ಷದ ನಾಯಕರನ್ನು ಭಯಭೀತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಆರ್​ಎಸ್ ಪಕ್ಷದ ಸಚಿವರೊಬ್ಬರು ವಾಗ್ದಾಳಿ ನಡೆಸಿದ್ದಾರೆ.

    ಪಾಕ್‌ ಆಟಗಾರರು ಐಪಿಎಲ್‌ ಆಡ್ಬೇಕಂತೆ…! ಸಖತ್ ಟಾಂಗ್​ ಕೊಟ್ಟ ಹರ್ಭಜನ್‌ ಸಿಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts