More

    ಬ್ರಿಟಿಷ್‌ ರಾಯಭಾರಿಗೆ ಕೈಯಿಂದ ಮಸಾಲೆದೋಸೆ ತಿನ್ನಿಸಿದ ಕನ್ನಡಿಗರು!

    ಬೆಂಗಳೂರು: ದಕ್ಷಿಣ ಭಾರತ ಎಂದ ಕೂಡಲೆ ಆಹಾರದಲ್ಲಿ ಪ್ರಮುಖವಾಗಿ ಪ್ರಸಿದ್ಧವಾಗಿರುವುದು ಇಡ್ಲಿ-ಸಾಂಬಾರ್, ಮಸಾಲೆ ದೋಸೆಯಂತಹ ಕೆಲವು ತಿನಿಸುಗಳು. ಅಂತಹ ‘ಮೈಸೂರು ಮಸಾಲೆ ದೋಸೆ’ಯನ್ನು ಯಾವ ರೀತಿ ಸೇವಿಸಬೇಕು ಎನ್ನುವುದನ್ನು ಭಾರತದಲ್ಲಿರುವ ಬ್ರಿಟಿಷ್ ರಾಯಭಾರಿಗೆ ಟ್ವಿಟ್ಟಿಗರು ಕಲಿಸಿಕೊಟ್ಟಿದ್ದಾರೆ. ಸ್ಥಳೀಯ ಶೈಲಿಗೆ ಅನುಗುಣವಾಗಿ ಆಹಾರ ಸೇವಿಸುವ ಮೂಲಕ, ಬೆಂಗಳೂರಿಗೆ ತಮ್ಮ ಮೊದಲ ಭೇಟಿಯಲ್ಲೇ ಕನ್ನಡಿಗರ ಮನಗೆಲ್ಲುವಲ್ಲಿ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲಿಸ್ ಯಶಸ್ವಿಯಾಗಿದ್ದಾರೆ.

    ಕೈಯಿಂದ ಸೇವಿಸಿದರೆ ಹೆಚ್ಚು ಟೇಸ್ಟ್

    ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲಿಸ್ ‘ಸ್ವಾದಿಷ್ಟಕರ ಮೈಸೂರು ಮಸಾಲೆ ದೋಸೆ, ಬೆಂಗಳೂರಿಗೆ ನನ್ನ ಮೊದಲ ಭೇಟಿಯನ್ನು ಆರಂಭಿಸಲು ಅತ್ಯುತ್ತಮ ಮಾರ್ಗ. ಸಕ್ಕತ್ ಆಗಿದೆ’ ಎಂದು ಇಂಗ್ಲಿಷ್‌ನಲ್ಲಿ ಬುಧವಾರ ಟ್ವೀಟ್ ಮಾಡಿ, ದೋಸೆ ತಿನ್ನುತ್ತಿರುವ ಫೋಟೋ ಹಾಕಿದ್ದರು. ಭಾರತೀಯರ ನೆಚ್ಚಿನ ಮಸಾಲೆ ದೋಸೆ ಸೇವನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

    ಬ್ರಿಟಿಷ್‌ ರಾಯಭಾರಿಗೆ ಕೈಯಿಂದ ಮಸಾಲೆದೋಸೆ ತಿನ್ನಿಸಿದ ಕನ್ನಡಿಗರು!
    ಹಿಂದಿನ ದಿನ ಸ್ಪೂನ್​-ಫೋರ್ಕ್​ ಬಳಸಿ ಮಸಾಲೆದೋಸೆ ತಿಂದಿದ್ದ ಹೈಕಮಿಷನರ್​

    ಮಸಾಲೆ ದೋಸೆಯನ್ನು, ಪಾಶ್ಚಾತ್ಯ ತಿನಿಸು ಸೇವಿಸುವಂತೆ ಒಂದು ಕೈಯಲ್ಲಿರುವ ಚಾಕುವಿನಿಂದ ಕತ್ತರಿಸಿ, ಮತ್ತೊಂದು ಕೈಯಲ್ಲಿರುವ ಫೋರ್ಕ್ ಮೂಲಕ ಸೇವಿಸುತ್ತಿದ್ದರು. ರಾಯಭಾರಿ ಫೋಟೊಗೆ 9 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಡಿಸುತ್ತಲೇ, ಮಸಾಲೆ ದೋಸೆಯನ್ನು ಕೈಯಿಂದ ಸೇವಿಸಿದರೆ ಅದರ ರುಚಿ ಇನ್ನಷ್ಟು ಚೆನ್ನಾಗಿರುತ್ತದೆ ಎಂದು ಬಹುತೇಕರು ಸಲಹೆ ನೀಡಿದ್ದರು. ಆಹಾರ ಸೇವನೆ ಅವರವರಿಗೆ ಬಿಡಬೇಕು, ಒತ್ತಾಯ ಮಾಡಬಾರದು ಎಂದು ಕೆಲವರು ತಿಳಿಸಿದರು. ವಿಚಾರವನ್ನು ಧನಾತ್ಮಕವಾಗಿ ಸ್ವೀಕರಿಸಿದ ಅಲೆಕ್ಸ್, ‘ನಾಳೆ ನಾನು ದೋಸೆಯನ್ನು ಯಾವ ರೀತಿ ಸೇವಿಸಲಿ? ಕೈಯಿಂದ ಅಥವಾ ಚಾಕು ಮತ್ತು ಫೋರ್ಕ್‌ನಿಂದ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎರಡೂವರೆ ಸಾವಿರ ಟ್ವಿಟ್ಟಿಗರಲ್ಲಿ ಶೇ.92 ಜನರು ಕೈಯಿಂದ ಎಂದು ಸಲಹೆ ನೀಡಿದ್ದರು.

    ಜನರ ಸಲಹೆ ಸರಿಯಾಗಿದೆ

    ಗುರುವಾರ ಮಸಾಲೆದೋಸೆಯನ್ನು ತಿನ್ನುವ ವಿಡಿಯೋವನ್ನು ಅಲೆಕ್ಸ್ ಅಪ್‌ಲೋಡ್ ಮಾಡಿದ್ದಾರೆ. ಮೊದಲಿಗೆ ಚಾಕು ಮತ್ತು ಫೋರ್ಕ್ ಕೈಗೆತ್ತಿಕೊಂಡು, ನಂತರ ಮೊಬೈಲ್ ನೋಡುತ್ತಾರೆ. ಟ್ವಿಟ್ಟಿಗರ ಸಲಹೆಯಂತೆಯೇ, ಚಾಕು ಮತ್ತು ಫೋರ್ಕ್ ಕೆಳಗಿಟ್ಟು, ಕೈಯಿಂದ ದೋಸೆ ಮುರಿದುಕೊಂಡು ಸಾಂಬಾರಿನಲ್ಲಿ ಅದ್ದಿ ಸೇವಿಸಿದ್ದಾರೆ. ‘ಶೇ.92 ಟ್ವಿಟ್ಟಿಗರ ಅಭಿಪ್ರಾಯ ಸರಿಯಾಗಿದೆ. ಕೈಯಿಂದ ಸೇವಿಸಿದರೆ ಹೆಚ್ಚು ರುಚಿಕರವಾಗಿದೆ. ಬೊಂಬಾಟ್ ಗುರು’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೂ ಸುಮಾರು 10 ಸಾವಿರ ಜನರು ಲೈಕ್ ಒತ್ತಿದ್ದಾರೆ.

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ನಮಗದು ಚಿನ್ನಕ್ಕಿಂತಲೂ ಹೆಚ್ಚು; ಒಲಿಂಪಿಕ್ಸ್​ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಯ ಗ್ರಾಮಸ್ಥರು ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts