More

    ಸೆಕ್ಸ್ ಮಾಡುವಾಗ ನಿದ್ರೆಗೆ ಜಾರಿದ ಗಂಡ; ಗಂಡನ ನಿದ್ರೆಯಿಂದಾಗಿ ಸತ್ತೇ ಹೋದ ಹೆಂಡತಿ!

    ಲಂಡನ್​: ಜನರಿಗೆ ಎಂತೆಂತದ್ದೋ ವಿಚಿತ್ರ ಆಸೆ, ಕನಸುಗಳು ಇರುತ್ತವೆ. ಅದೇ ರೀತಿ ವಿಚಿತ್ರ ಆಸೆಯೊಂದರ ಬೆನ್ನು ಹತ್ತಿ ಹೋದ ಮಹಿಳೆ, ಸೆಕ್ಸ್ ಆಸೆ ತೀರುವ ಮೊದಲೇ ಸಾವನ್ನಪ್ಪಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ.


    52 ವರ್ಷದ ವಾರೆನ್ ಮಾರ್ಟಿನ್ ಕೌಲ್ಟನ್ ಮತ್ತು 38 ವರ್ಷದ ಕ್ಲೇರ್ ವೈಟ್ ದಂಪತಿ ಇತ್ತೀಚೆಗೆ ಒಂದು ರೆಸ್ಟೋರೆಂಟ್​ಗೆ ತೆರಳಿದ್ದರು. ವಿಚಿತ್ರ ವಿಚಿತ್ರ ಸ್ಟೈಲ್​ನಲ್ಲಿ ಸೆಕ್ಸ್ ಮಾಡಬೇಕೆಂಬಗ ಆಸೆಯೊಂದಿಗೆ ಅಲ್ಲಿಗೆ ತೆರಳಿದ್ದ ದಂಪತಿ ಒಂದು ವಿಶೇಷ ಯೋಜನೆ ಹಾಕಿಕೊಂಡಿದ್ದಾರೆ. ಕಂಠ ಪೂರ್ತಿ ಕುಡಿದು, ಡ್ರಗ್ಸ್​ ಸೇವಿಸಿ ಸೆಕ್ಸ್​ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಕ್ಲೇರ್​ಳ ಕೈಗಳನ್ನು ಕಟ್ಟಿ ಹಾಕಿ, ಬಾಯಿಯನ್ನು ಟೇಪ್​ನಿಂದ ಮುಚ್ಚಿ ನಂತರ ಸೆಕ್ಸ್​ ಮಾಡಿದ್ದಾರೆ.


    ಈ ರೀತಿ ಸೆಕ್ಸ್​ ಮಾಡುತ್ತಿದ್ದಾಗ ಅಚಾನಕ್ಕಾಗಿ ವಾರೆನ್​ಗೆ ನಿದ್ರೆ ಬಂದಿದೆ. ಅಲ್ಲಿಯೇ ಆತ ನಿದ್ರೆಗೆ ಜಾರಿದ್ದಾನೆ. ಇತ್ತ ವಿಪರೀತಿ ಮತ್ತಿನಲ್ಲಿದ್ದ ಕ್ಲೇರ್​ ತನ್ನ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಅದು ಆಕೆಯಿಂದ ಸಾಧ್ಯವಾಗಿಲ್ಲ. ಸಾಕಷ್ಟು ಸಮಯ ಒದ್ದಾಡಿದ ನಂತರ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ.


    ಬೆಳಗ್ಗೆ ಎದ್ದ ವಾರೆನ್​ ಹೆಂಡತಿಯನ್ನು ಕಂಡು ಗಾಬರಿಗೊಂಡಿದ್ದಾನೆ. ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ರೂಮಿನಲ್ಲಿ ಮಹಿಳೆಯ ಮೃತ ದೇಹ ಕಂಡ ರೆಸ್ಟೋರೆಂಟ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಾರೆನ್​ ವಿರುದ್ಧ ಪ್ರಕರಣ ದಾಖಲಾಗಿದೆ. ಕ್ಲೇರ್​ನ ಕುಟುಂಬಸ್ಥರು ಆಕೆಯ ಸಾವಿನಿಂದಾಗಿ ಅಘಾತಕ್ಕೆ ಒಳಗಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts