More

    ಯುಎಸ್ ಓಪನ್ ಜಯಿಸಿದ ರಡುಕಾನುಗೆ ಅಭಿನಂದನೆಗಳ ಮಹಾಪೂರ

    ನ್ಯೂಯಾರ್ಕ್: ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಬ್ರಿಟನ್‌ನ ಎಮ್ಮಾ ರಡುಕಾನುಗೆ ತವರಿನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಬ್ರಿಟನ್ ರಾಣಿ ಕ್ವೀನ್ ಎಲಿಜಬೇತ್-2 ಸೇರಿದಂತೆ ದೇಶದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಶನಿವಾರ ನಡೆದ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಡುಕಾನು 6-4, 6-3 ನೇರ ಸೆಟ್‌ಗಳಿಂದ 19 ವರ್ಷದ ಕೆನಡದ ಲೆಲಾಹ್ ಫೆರ್ನಾಂಡೆಜ್ ಎದುರು ಸುಲಭ ಜಯ ದಾಖಲಿಸಿದರು. ಈ ಮೂಲಕ 44 ವರ್ಷಗಳ ಬಳಿಕ ಬ್ರಿಟನ್ ಆಟಗಾರ್ತಿಯೊಬ್ಬರು ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. 1977ರಲ್ಲಿ ಬ್ರಿಟನ್ ವಿರ್ಗಿನಿಯಾ ವೇಡ್ ಕಡೇ ಬಾರಿಗೆ ಬ್ರಿಟನ್ ಪರ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದರು.

    ನಿಮ್ಮ ಯಶಸ್ವಿಗೆ ನನ್ನ ಅಭಿನಂದನೆಗಳು, ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದೀರಿ. ನಿಮ್ಮ ಕಠಿಣ ಶ್ರಮಕ್ಕೆ ಕಡೆಗೂ ಬೆಲೆ ದಕ್ಕಿದೆ ಎಂದು ರಾಣಿ ಎಲಿಜಬೇತ್ ತಿಳಿಸಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಎಮ್ಮಾ ರಡುಕಾನು ಅದ್ಭುತ ನಿರ್ವಹಣೆ ತೋರಿದ್ದೀರಿ, ನಿಮ್ಮ ಆಟದ ಕೌಶಲ ತುಂಬಾ ಚೆನ್ನಾಗಿತ್ತು. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ರಡುಕಾನೆಗೆ ಹಾಲಿ ಹಾಗೂ ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.

    ಮೂರು ವಾರಗಳ ಹಿಂದಷ್ಟೇ ವಿಶ್ವ ನಂ.150 ರ‌್ಯಾಂಕಿಂಗ್‌ನೊಂದಿಗೆ ವರ್ಷದ ಕಡೇ ಗ್ರಾಂಡ್ ಸ್ಲಾಂ ಆಡಲು ಆಶಿಂಗ್ ಮೆಡೋಸ್‌ಗೆ ಬಂದಿದ್ದ ಬ್ರಿಟನ್‌ನ 18 ವರ್ಷದ ಯುವ ಆಟಗಾರ್ತಿ ಎಮ್ಮಾ ರಾಡುಕೇನು, ಶನಿವಾರ ಯುಎಸ್ ಓಪನ್ ಜಯಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.3 ಅರ್ಹತಾ ಸುತ್ತಿನ ಪಂದ್ಯಗಳು ಸೇರಿದಂತೆ ಫ್ಲೆಶಿಂಗ್ ಮೆಡೋಸ್‌ನಲ್ಲಿ ಆಡಿದ 10 ಪಂದ್ಯಗಳಲ್ಲೂ ಜಯ ದಾಖಲಿಸಿದ ರಾಡುಕೇನು, 2014ರ ಬಳಿಕ ಏಕೈಕ ಸೆಟ್ ಬಿಟ್ಟುಕೊಡದೆ ಯುಎಸ್ ಓಪನ್ ಜಯಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts