More

    ಶರೀರ, ಮನಸ್ಸುಗಳನ್ನು ಕೂಡಿಸುವುದೇ ಯೋಗ

    ಅಳವಂಡಿ: ಶರೀರ, ಮನಸ್ಸು, ಬುದ್ಧಿ ಮತ್ತು ಭಾವನೆಗಳನ್ನು ಒಗ್ಗೂಡಿಸುವ ಪ್ರಕ್ರಿಯೇ ಯೋಗ ಎಂದು ಕವಲೂರು ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಸಿ.ಸಿ. ವಾಚದಮಠ ತಿಳಿಸಿದರು.

    ಇದನ್ನೂ ಓದಿ: ದೇಹ ದಂಡನೆಯಿಂದ ಆರೋಗ್ಯವಂತ ಶರೀರ ಪ್ರಾಪ್ತಿ

    ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಟ್ಟಿ ಉಪಕೇಂದ್ರದಿಂದ ಆಯುಷ್ಮಾನ್‌ಭವ ಕಾರ್ಯಕ್ರಮದಡಿ ಆಯೋಜಿಸಿದ್ದ ಆರೋಗ್ಯ ಮಾಹಿತಿ ಹಾಗೂ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ಯೋಗದಿಂದ ವ್ಯಕ್ತಿಯ ಮನೋಬಲ ಸುಧಾರಣೆಯಾಗುತ್ತದೆ. ದೇಹ ಸದೃಢಗೊಳ್ಳುವ ಜತೆಗೆ ಶ್ವಾಸಕೋಶ, ಯಕೃತ ಬಲಗೊಳ್ಳುತ್ತದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಒತ್ತಡ ಹಾಗೂ ರೋಗ ಮುಕ್ತ ಜೀವನಕ್ಕೆ ಸಹಕಾರಿಯಾಗಿದೆ ಎಂದರು.

    ಯೋಗಪಟು ರೇಷ್ಮಾ ವಡ್ಡಟ್ಟಿ ಮಾತನಾಡಿ, ಮಕ್ಕಳು ಯೋಗವನ್ನು ಪ್ರತಿನಿತ್ಯದ ಅಭ್ಯಾಸವಾಗಿಸಿಕೊಳ್ಳಬೇಕು. ಇದು ಜ್ಞಾನ ಶಕ್ತಿ ಹೆಚ್ಚಿಸುತ್ತದೆ. ಹೃದಯ ಬಡಿತ ಸಾಮಾನ್ಯ ಸ್ಥಿತಿ ಹಾಗೂ ರಕ್ತ ಪರಿಚಲನೆ ಚನ್ನಾಗಿ ಆಗುತ್ತದೆ.

    ನಿರಂತರ ಅಭ್ಯಾಸದಿಂದ ಬಳಲಿಕೆ, ಸುಸ್ತು ದೂರವಾಗಿ ಮನಸ್ಸು ಉಲ್ಲಾಸಗೊಂಡು ಓದಿಗೆ ಸಹಕಾರಿಯಾಗುತ್ತದೆ ಎಂದರು. ನಂತರ ಮಕ್ಕಳಿಗೆ ಯೋಗದ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

    ಯೋಗಪಟು ರೇಷ್ಮಾ ವಡ್ಡಟ್ಟಿ ಅವರನ್ನು ಶಾಲೆಯಿಂದ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ವೀರಣ್ಣ ಮಟ್ಟಿ, ಶಿಕ್ಷಕರಾದ ರವಿಕುಮಾರ, ಪ್ರಶಾಂತ ಹಿರೇಮಠ, ಶರಾವತಿ, ಹಂಪಮ್ಮ, ಶುಭಮಂಗಳಾ, ಗೌತಮಿ, ನೇತ್ರಾವತಿ, ಆರೋಗ್ಯ ಇಲಾಖೆಯ ವಸಂತರಡ್ಡಿ ಗದ್ದಿಕೇರಿ, ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಸುಜಾತಾ ಇಟಗಿ, ಆಸ್ಮಾ, ಯಲ್ಲಮ್ಮ, ಮಹಾಲಕ್ಷ್ಮೀ ರೇಣವ್ವ, ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts