More

    ಸಾವಯವ ಕೃಷಿಯಿಂದ ಭೂಮಿಗೆ ಮತ್ತೆ ಜೀವ

    ರಿಪ್ಪನ್‌ಪೇಟೆ: ಅಧಿಕ ಇಳುವರಿ, ಹೆಚ್ಚಿನ ಲಾಭ ನಿರೀಕ್ಷೆಯಿಂದ ಜನರು ಯಥೇಚ್ಛವಾಗಿ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಭೂಮಿ ತನ್ನ ಮೂಲಸತ್ವವನ್ನು ಕಳೆದುಕೊಂಡಿದೆ. ಪುನಃ ವಿಷರಹಿತವನ್ನಾಗಿಸಲು ರೈತರು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಗಣಪತಿ ತಿಳಿಸಿದರು.

    ಸಮೀಪದ ಗವಟೂರು ಗ್ರಾಮದ ರೈತ ಎಂ.ರಾಮಚಂದ್ರ ಅವರ ತೋಟದಲ್ಲಿ ರೋಟರಿ ಕ್ಲಬ್, ರೈತಸಂಪರ್ಕ ಕೇಂದ್ರ, ಕೃಷಿ ವಿವಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಣ್ಣೇ ಹೊನ್ನು ಎಂಬ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಮಣ್ಣು ಪ್ರಕೃತಿಯಲ್ಲಿ ದೊರೆಯುವ ಒಂದು ಅಮೂಲ್ಯ ವಸ್ತು. ಪ್ರತಿಯೊಂದು ಜೀವಿಯು ಭೂಮಿಯನ್ನೇ ಬಳಸಿಕೊಂಡು ಬದುಕುವುದು ಅನಿವಾರ್ಯ. ಹೀಗಿರುವಾಗ ನಮಗೆ ಆಧಾರವಾಗಿರುವ ಮಣ್ಣನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.
    ಕಡಿಮೆ ಅವಧಿಗೆ ಹೆಚ್ಚು ಆದಾಯ ಪಡೆಯುವ ಸಲುವಾಗಿ ರಾಸಾಯನ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸಿ ಮಲಿನಗೊಳಿಸಿದ್ದೇವೆ. ಪರಿಣಾಮ ವಾತಾವರಣ ಮತ್ತು ಮನುಷ್ಯನ ಆರೋಗ್ಯ ಹದಗೆಟ್ಟಿದೆ. ಆದ್ದರಿಂದ ಹಿಂದಿನ ಕಾಲದ ಸಾವಯವ ಪದ್ಧತಿಯು ಅತಿ ಅಮೂಲ್ಯವಾಗಿದೆ. ರೈತರು ಕೃಷಿ ತಂತ್ರಜ್ಞರಿಂದ ಮಾಹಿತಿ ಪಡೆದು ಬೆಳೆ ಹಾಗೂ ಭೂಮಿಗೆ ಬೇಕಾದಂತಹ ಲವಣಾಂಶಗಳನ್ನು ನೀಡುವ ಮೂಲಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಮಣ್ಣು ಎಂಬುದು ಹೊನ್ನಿಗಿಂತಲೂ ಶ್ರೇಷ್ಠವೆಂಬ ನಾಡ್ನುಡಿಗೆ ಅರ್ಥಬರುತ್ತದೆ ಎಂದು ಹೇಳಿದರು.
    ರೋಟರಿ ಕ್ಲಬ್ ಅಧ್ಯಕ್ಷ ದೇವದಾಸ್, ಕೃಷಿ ಅಧಿಕಾರಿ ಶಾಂತಮೂರ್ತಿ, ಸಹಾಯಕ ಪ್ರಾಧ್ಯಾಪಕ ಎಸ್.ಜಿ.ಶಶಿಕಲಾ, ಬಿ.ಕೆ.ಶಿವಣ್ಣ, ಪ್ರಮುಖರಾದ ಎಂ.ಬಿ.ಲಕ್ಷ್ಮಣಗೌಡ, ಎಂ.ರಾಮಚಂದ್ರ, ಗಣಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts