More

    ಶಾರದೆ, ದುರ್ಗೆಯಾದಾಗ … ಬೃಂದಾ ಈಗ ‘ಜ್ಯೂಲಿಯಟ್​’

    ಬೆಂಗಳೂರು: ಕಳೆದ ವರ್ಷ ಇದೇ ಸಮಯದಲ್ಲಿ ‘ನೆನಪಿರಲಿ’ ಪ್ರೇಮ್​ ಅಭಿನಯದ ‘ಪ್ರೇಂ ಪೂಜ್ಯಂ’ ಚಿತ್ರವು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟಿಸಿದ್ದ ಬೃಂದಾ ಆಚಾರ್ಯ ಆ ನಂತರ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ಗ್ಯಾಪ್​ನಲ್ಲಿ ಬೃಂದಾ ಆಚಾರ್ಯ, ‘ಜ್ಯೂಲಿಯಟ್​ 2’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಫಸ್ಟ್​ ಲುಕ್​ ಇದೀಗ ಬಿಡುಗಡೆ ಆಗಿದೆ.

    ಇದನ್ನೂ ಓದಿ: ಇದು ಕ್ರಿಕೆಟ್​ ಆಟಗಾರ್ತಿಯ ಸಾಧನೆಯ ಕಥೆ … ಅತಿಥಿ ಪಾತ್ರಗಳಲ್ಲಿ ರಣಜಿ ಆಟಗಾರರು

    ‘ಜ್ಯೂಲಿಯಟ್​ 2’ ಎಂದರೆ ಇದೇನು ‘ಜ್ಯೂಲಿಯಟ್​’ ಎಂಬ ಚಿತ್ರದ ಮುಂದುವರೆದ ಭಾಗವಾ ಎಂದನಿಸಬಹುದು. ಆದರೆ, ಇದಕ್ಕೂ ಮುನ್ನು ‘ಜ್ಯೂಲಿಯಟ್​’ ಎಂಬ ಯಾವ ಚಿತ್ರವೂ ಬಂದಿಲ್ಲವಾದ್ದರಿಂದ, ಇದನ್ನು ಸೀಕ್ವೆಲ್​ ಎಂದು ಕರೆಯುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ, ಈ ಚಿತ್ರದ ಕಥೆ ಏನು ಎಂಬ ಪ್ರಶ್ನೆಗೆ ಚಿತ್ರ ಬಿಡುಗಡೆಯಾದಾಗಲೇ ಉತ್ತರ ಸಿಗಬೇಕು.

    ‘ಜ್ಯೂಲಿಯಟ್​ 2’ ಚಿತ್ರಕ್ಕೆ ವಿರಾಟ್ ಬಿ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಆಗುತ್ತದೆ. ಶಾಂತರೂಪಿಯಾದ ಶಾರದೆಯ ರೀತಿ ಇರುವ ಹೆಣ್ಣು, ತೊಂದರೆಯಾದಾಗ ಹೇಗೆ ದುರ್ಗೆಯಾಗುತ್ತಾಳೆ ಎಂಬುದು ಈ ಚಿತ್ರದ ಕಥೆಯಂತೆ.

    ಪಿ.ಎಲ್​. ಪ್ರೊಡಕ್ಷನ್ಸ್​​ನಡಿ ಲಿಖಿತ್ ಆರ್ ಕೋಟ್ಯಾನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ಈ ಅಮೂಲ್ಯವಾದ ವಜ್ರವನ್ನು ಆತ್ಮಗಳು ಕಾಯುತ್ತವಂತೆ …

    ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಮತ್ತು ಶಾಂತೋ ವಿ ಆಂತೋ ಛಾಯಾಗ್ರಹಣವಿರುವ ಈ ಚಿತ್ರವು ಕನ್ನಡವಲ್ಲದೆ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಆ ನಂತರ ಮೊದಲ ಭಾಗ ಬರುವ ಸಾಧ್ಯತೆ ಇದೆ.

    ಈ ತ್ರಿಕೋನ ಪ್ರೇಮಕಥೆಯಲ್ಲಿ ಹೀರೋ ಯಾರು? ವಿಲನ್ ಯಾರು​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts