More

    ಜ್ಞಾನದೀಪ ಶಾಲೆಗೆ ಶೇ 99.48

    ಹೊಳೆಹೊನ್ನೂರು: ಸಮೀಪದ ಜಾವಳ್ಳಿ ಜ್ಞಾನದೀಪ ಶಾಲೆ ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ 99.48ರಷ್ಟು ಲಿತಾಂಶ ಪಡೆದಿದೆ.
    ಪರೀಕ್ಷೆಗೆ ಹಾಜರಾದ ಒಟ್ಟು 193ರಲ್ಲಿ 192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿ.ಅಭಿನವ್ (ಶೇ.97.4) ಪ್ರಥಮ, .ಎ.ಸಿ.ಪೊನ್ನೇಶ್ (ಶೇ.97) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
    12ನೇ ತರಗತಿ: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಲಿತಾಂಶ ಪಡೆದಿದೆ. ಪರೀಕ್ಷೆ ಬರೆದ ಎಲ್ಲ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿ.ಶಶಾಂಕ (ಶೇ.93.8) ಪ್ರಥಮ, ಲಕ್ಷಿತಾ ಜೈನ್ (ಶೇ.90.4) ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
    ವಿಜ್ಞಾನ ವಿಭಾಗದಲ್ಲಿ ಶೇ.96.15 ಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ 52ರಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಸ್.ಎಸ್. ಹರ್ಷಿಣಿ (ಶೇ.95.8) ಪ್ರಥಮ, ಜಿ.ಎಸ್.ಮಿನಲ್ (ಶೇ.95.2) ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಿಬಿಎಸ್‌ಇ 12ನೇ ತರಗತಿ ವಾಣಿಜ್ಯ ವಿಭಾಗದಲ್ಲಿ ಕುಮಾರ್ ಶಶಾಂಕ (ಶೇ.93.8) ಅಂಕ ಪಡೆಯುವ ಮೂಲಕ ಸ್ಕೂಲ್‌ಟಾಪರ್ ಆಗಿದ್ದಾರೆ. ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts