More

    ರಾಜಕೀಯ ಮನಸ್ಥಿತಿ ದೂರಾಗಲಿ

    ಹೊಳೆಹೊನ್ನೂರು: ರೈತಾಪಿಗಳು ವೃತ್ತಿ ಗೌರವ ಬೆಳೆಸಿಕೊಂಡು ಆತ್ಮತೃಪ್ತಿಯಿಂದ ಸುಖ ಜೀವನ ನಡೆಸುವಂತಾಗಬೇಕು ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

    ಸಮೀಪದ ನಾಗಸಮುದ್ರದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಶಿವಮೂರ್ತಿ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ನಿಸ್ವಾರ್ಥ ಭಾವದಿಂದ ಬದುಕುವ ಕುಲ ರೈತ ಕುಲ. ಒಳ್ಳೆಯದನ್ನು ಒಳ್ಳೆಯದು ಕೆಟ್ಟದನ್ನು ಕೆಟ್ಟದು ಎಂದು ಹೇಳುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ತನಗಾಗಿ ಬದುಕದೆ ತನ್ನವರಿಗಾಗಿ ಬದುಕಿದರೆ ಜೀವನ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ. ರಾಮ ಮಂದಿರ ನಿರ್ಮಾಣ ಸೇರಿದಂತೆ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮನಸ್ಥಿತಿಗಳು ಕಡಿಮೆ ಆಗಬೇಕು. ಎಲ್ಲ ರಂಗಗಳಲ್ಲೂ ರಾಜಕೀಯ ಹಾಸುಹೊಕ್ಕಾಗುತ್ತಿರುವುದು ದುರದೃಷ್ಟಕರ. ರೈತ ಚಳವಳಿಗಳು ವಸ್ತು ನಿಷ್ಠವಾಗಿರಬೇಕು. ದೇಶಕ್ಕೆ ಶುದ್ಧ ಪ್ರಜಾಪ್ರಭುತ್ವದ ಅವಶ್ಯತೆ ಇದೆ. ಶುದ್ಧ ಪ್ರಜಾಪ್ರಭುತ್ವ ನೀಡುವ ತಾಕತ್ತು ರೈತ ಸಂಘಕ್ಕಿದೆ ಎಂದರೆ ತಪ್ಪಾಗಲಾರದು ಎಂದರು.
    ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ತಾಲೂಕು ಅಧ್ಯಕ್ಷ ಪಂಚಾಕ್ಷರಪ್ಪ, ಗೌರವಾಧ್ಯಕ್ಷ ಕುರುವ ಗಣೇಶ್, ಪಿ.ಡಿ.ಮಂಜಪ್ಪ, ಟಿ.ಎಂ ಚಂದ್ರಪ್ಪ, ಷಡಕ್ಷರಪ್ಪ ಗೌಡ, ಮಲ್ಲೇಶಪ್ಪ, ತೀರ್ಥಯ್ಯ, ಲೊಕೇಶಪ್ಪ, ಕಮಲಮ್ಮ, ರಾಜಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts