More

    ಬ್ರಿಜ್ ಭೂಷಣ್ ಸಿಂಗ್ ಬಂಧಿಸಿ: ಕುರುಗೋಡಿನಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆ ಪ್ರತಿಭಟನೆ

    ಕುರುಗೋಡು: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಡಬ್ಲುೃಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಎಐಕೆಕೆಎಂಎಸ್ ರೈತ ಸಂಘಟನೆ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.


    ಇದನ್ನೂ ಓದಿ: ಬ್ರಿಜ್‌ಭೂಷಣ್ ಬಂಧನಕ್ಕೆ ಒತ್ತಡ  ಎಐಎಂಎಸ್‌ಎಸ್‌ನಿಂದ ಪ್ರತಿಭಟನಾ ದಿನಾಚರಣೆ

    ದೆಹಲಿ ಜಂತರ್‌ಮಂತರ್‌ನಲ್ಲಿ ಕುಸ್ತಿಪಟುಗಳು ಧರಣಿ

    ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ, ದೆಹಲಿ ಜಂತರ್‌ಮಂತರ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆಡಳಿತರೂಢ ಪಕ್ಷದ ಸಂಸದರಾಗಿರುವ ಸಿಂಗ್ ಅವರ ಪ್ರಭಾವಕ್ಕೆ ಪೊಲೀಸರು ಮಂಡಿಯೂರಿದ್ದಾರೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.


    ಈ ಪ್ರಕರಣ ಪೋಕ್ಸೋ ಕಾಯ್ದೆ ಅಡಿಯಲ್ಲಿಯೂ ಬರಲಿದೆ

    ವಿಶ್ವ ಚಾಂಪಿಯನ್‌ಷಿಪ್, ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿರುವ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರು ಹಾಗೂ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ ದೂರು ನೀಡಿರುವ ಏಳು ಸಂತ್ರಸ್ತೆಯರಲ್ಲಿ ಒಬ್ಬ ಬಾಲಕಿ ಇದ್ದಾಳೆ. ಆದ್ದರಿಂದ ಈ ಪ್ರಕರಣ ಪೋಕ್ಸೋ ಕಾಯ್ದೆ ಅಡಿಯಲ್ಲಿಯೂ ಬರಲಿದೆ.

    ಇಷ್ಟಾದರೂ ಪೊಲೀಸರು ಕ್ರಮಕೈಗೊಂಡಿಲ್ಲ

    ಇಷ್ಟಾದರೂ ಪೊಲೀಸರು ಕ್ರಮಕೈಗೊಂಡಿಲ್ಲ. ಅಲ್ಲದೆ ಸಾಕ್ಷೃ ನಾಶಗೊಳಿಸಲು ಪ್ರಯತ್ನ ನಡೆದಿದ್ದು, ಸಂತ್ರಸ್ತರಿಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದರು. ಸಂಘದ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ನಿಂಗಪ್ಪ, ಶ್ರೀನಿವಾಸ್, ಮಣಿಕಂಠ, ಬಸವರಾಜ್, ಕಾಸಿಂಸಾಬ್ ಸದಸ್ಯರಾದ ಅನಿಲ್, ಮಾಬುಸಾಬ್, ರಾಮಾಂಜಿನಿ, ರಮೇಶ್, ಮುತ್ತಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts