More

    ಕಿರುಸೇತುವೆ ಕುಸಿದು ಸಂಪರ್ಕ ಅಡ್ಡಿ

    ಹರಿಪ್ರಸಾದ್ ಬೆಳ್ಮಣ್

    ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಬೆಳ್ಳೆಯಿಂದ ಕಟ್ಟಿಂಗೇರಿ ಶಿರ್ವ ಗ್ರಾಮವನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಟ್ಟಿಂಗೇರಿ ಬಳಿಯಿರುವ ಕಿರು ಸೇತುವೆಯ ಸ್ಲಾೃಬ್ ಕುಸಿದು, ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರ ಸ್ಥಗಿತಗೊಂಡಿದೆ.
    ಮೂಡುಬೆಳ್ಳೆಯಿಂದ ಕಟ್ಟಿಂಗೇರಿ, ಮಾಣಿಬೆಟ್ಟು ಮೂಲಕ ಶಿರ್ವ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ಭಾಗದ 600ಕ್ಕೂ ಹೆಚ್ಚಿನ ಮನೆಗಳ ಗ್ರಾಮಸ್ಥರು ವಾಹನ ಸಂಚಾರವಿಲ್ಲದೆ ಕಿಲೋ ಮೀಟರ್‌ಗಟ್ಟಲೆ ಕಾಲಡ್ನಿಗೆಯಲ್ಲೇ ಸಾಗುವಂತಾಗಿದೆ.
    ಪರಿಸರದ ನಾಗರಿಕರು ಶಿರ್ವ ಹಾಗೂ ಮೂಡುಬೆಳ್ಳೆ ಪ್ರಮುಖ ಪೇಟೆ ಸಂಪರ್ಕಿಸಲು ಸುತ್ತು ಬಳಸಿ ಸಾಗಬೇಕಾಗಿದೆ. ಕುಸಿತಗೊಂಡಿರುವ ಸಂಪರ್ಕ ರಸ್ತೆಯ ಕಾಮಗಾರಿ ಶೀಘ್ರ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಿರು ಸೇತುವೆ ಸೇತುವೆ ಬಿರುಕು ಬಿಟ್ಟರೂ ವಾಹನಗಳು ಅಪಾಯಕಾರಿ ಸೇತುವೆಯ ಮೇಲೆಯೇ ಸಂಚರಿಸುತ್ತಿದ್ದವು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
    ಬ್ಯಾರಿಕೇಡ್ ಅಳವಡಿಕೆ: ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ಮುನ್ನೆಚ್ಚರಿಕೆ ನೀಡಲಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಬೆಳ್ಳೆ ಗ್ರಾಪಂ ಮತ್ತು ಗ್ರಾಮಸ್ಥರು ಬ್ಯಾರಿಕೇಡ್ ಅಳವಡಿಸಿ ಭಾಗಶಃ ರಸ್ತೆ ಬಂದ್ ಮಾಡಿದ್ದಾರೆ. ನಾಗರಿಕರ ತುರ್ತು ಅನುಕೂಲಕ್ಕಾಗಿ ಒಂದು ಭಾಗದಲ್ಲಿ ದ್ವಿಚಕ್ರವಾಹನ ಸವಾರರಿಗೆ ಚಲಿಸಲು ಅವಕಾಶ ಮಾಡಿಕೊಡಲಾಗಿದೆ. ಅಪಾಯಕಾರಿ ರಸ್ತೆಯಲ್ಲಿ ಸಂಚಾರ ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

    ಶಾಸಕ ಲಾಲಾಜಿ ಭರವಸೆ
    ಕಿರುಸೇತುವೆ ನಿರ್ಮಿಸಲು 25 ಲಕ್ಷ ರೂ. ಬೇಕಾಗಿದ್ದು, ಗ್ರಾಮಸ್ಥರೊಂದಿಗೆ ಪಂಚಾಯಿತಿ ಅಧಿಕಾರಿಗಳು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು ಭೇಟಿ ಮಾಡಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕಾಮಗಾರಿ ನಡೆಸಲು ಗುತ್ತಿಗೆದಾರರನ್ನು ಶಾಸಕರು ಸಂಪರ್ಕಿಸಿ, ಜಿ.ಪಂ. ಮುಖ್ಯ ಇಂಜಿನಿಯರ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿದ್ದಾರೆ.

    ಮಳೆಗಾಲದಲ್ಲಿ ತೋಡು ತುಂಬಿ ರಭಸವಾಗಿ ಹರಿಯುತ್ತಿರುವುದರಿಂದ ಸೇತುವೆ ಪಿಲ್ಲರ್ ಹಾಕಲು ತೊಂದರೆಯಾಗುತ್ತಿದ್ದು, ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು, ಮಳೆಗಾಲ ಮುಗಿದ ಕೂಡಲೇ ಸೇತುವೆ ಕಾಮಗಾರಿ ನಡೆಸಲಾಗುವುದು.
    ಸುಧಾಕರ ಪೂಜಾರಿ, ಬೆಳ್ಳೆ ಗ್ರಾಪಂ ಅಧ್ಯಕ್ಷ

    ಕಿರು ಸೇತುವೆ ಕುಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಷ್ಟಕರವಾಗಿದೆ. ಈಗಾಗಲೇ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿ ಕಾಮಗಾರಿ ನಡೆಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದಾರೆ.
    ಉಮೇಶ್ಗ್ರಾ, ಮಸ್ಥರು


     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts