More

    ಮದುವೆಯಲ್ಲಿ ಗಂಡನಿಗೆ ತಾಳಿ ಕಟ್ಟಿದ ಹೆಂಡತಿ! ಹಠ ಹಿಡಿದು ತಾಳಿ ಕಟ್ಟಿಸಿಕೊಂಡ ಪತಿರಾಯ!

    ಮುಂಬೈ: ಸಾಮಾನ್ಯವಾಗಿ ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟಬೇಕು. ಆದರೆ ಈ ಕಥೆ ಸ್ವಲ್ಪ ವಿಚಿತ್ರವೇ. ಇಲ್ಲಿ ಹೆಣ್ಣಿಗೆ ಗಂಡು ತಾಳಿ ಕಟ್ಟುವ ಜತೆ ಗಂಡಿಗೆ ಹೆಣ್ಣೂ ತಾಳಿ ಕಟ್ಟಿದ್ದಾಳೆ. ಸ್ತ್ರೀ ಸಮಾನತೆಗಾಗಿ ಈ ರೀತಿ ಹೊಸ ಸಂಪ್ರದಾಯ ಆರಂಭಿಸಬೇಕೆಂದು ವರನೇ ಹಠ ಮಾಡಿದ್ದಾಗಿ ಹೇಳಲಾಗಿದೆ.


    ಆತನ ಹೆಸರು ಶಾರ್ದೂಲ್​ ಕದಮ್​. ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದ ತನುಜಾಳನ್ನು ಕಾಲೇಜು ಮುಗಿದು ನಾಲ್ಕು ವರ್ಷಗಳ ನಂತರ ಪ್ರೀತಿಸಲು ಆರಂಭಿಸಿದ್ದ. ಪರಸ್ಪರ ಪ್ರೀತಿ ಹಂಚಿಕೊಂಡಿದ್ದ ಜೋಡಿ 2020ರಲ್ಲಿ ಹಸೆಮಣೆ ಏರುವ ನಿರ್ಧಾರ ಮಾಡಿತ್ತು. ಆದರೆ ತನುಜಾ ಬಳಿ ತಾನು ಅಪ್ಪಟ ಸ್ತ್ರೀಸಮಾನತಾವಾದಿ ಎಂದು ಹೇಳಿಕೊಂಡಿದ್ದ ಶಾರ್ದೂಲ್​ ಮದುವೆಗೆ ಮೊದಲು ಹೊಸ ಹಠ ಹಿಡಿದಿದ್ದಾನೆ. ನಾನು ಮದುವೆಯಾಗುತ್ತೇನೆ, ಆದರೆ ಮದುವೆಯಲ್ಲಿ ನಾನು ನಿನಗೆ ಹೇಗೆ ತಾಳಿ ಕಟ್ಟುತ್ತೇನೋ ಹಾಗೇ ನೀನೂ ನನಗೆ ತಾಳಿ ಕಟ್ಟಬೇಕು ಎಂದು ಹೇಳಿದ್ದಾನೆ.


    ಮನೆಯವರು ಎಷ್ಟೇ ಹೇಳಿದರೂ ಶಾರ್ದೂಲ್​ ತನ್ನ ವಾದ ಬಿಟ್ಟುಕೊಟ್ಟಿಲ್ಲ. ಕೊನೆಗೆ ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಆತನ ಇಷ್ಟದಂತೆಯೇ ಮದುವೆ ಮಾಡಲಾಗಿದೆ. ತನುಜ ಶಾರ್ದೂಲ್​ಗೆ ತಾಳಿ ಕಟ್ಟಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್ ಆಗಿದೆ.

    ಮದುವೆಯಲ್ಲಿ ಗಂಡನಿಗೆ ತಾಳಿ ಕಟ್ಟಿದ ಹೆಂಡತಿ! ಹಠ ಹಿಡಿದು ತಾಳಿ ಕಟ್ಟಿಸಿಕೊಂಡ ಪತಿರಾಯ!
    ಈ ವಿಚಾರವಾಗಿ ಅನೇಕರು ಟ್ರೋಲ್​ ಮಾಡಿದ್ದಾರೆ. ನೀನು ಅಷ್ಟೊಂದು ಸ್ತ್ರೀ ಸಮಾನತಾವಾದಿ ಆಗಿದ್ದರೆ ಮದುವೆಯಲ್ಲಿ ಸೀರೆ ಉಟ್ಟು ಕೂರಬೇಕಿತ್ತು ಎಂದು ಕಾಲೆಳೆದಿದ್ದಾರೆ. ಆದರೆ ಇಂತಹ ಯಾವುದೇ ಮಾತಿಗೆ ಆ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಹೆಣ್ಣು ಮಕ್ಕಳ ನೋವು ನನಗೆ ಗೊತ್ತು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದು ಶಾರ್ದೂಲ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದಿನಿಂದ ಇಬ್ಬರೂ ತಮ್ಮ ಮಂಗಲಸೂತ್ರಕ್ಕೆ ಅತ್ಯಂತ ಪವಿತ್ರ ಸ್ಥಾನ ಕೊಟ್ಟಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ದಿವ್ಯಾ ಉರುಡುಗ ಬಿಗ್​ಬಾಸ್​ನಿಂದ ಹೊರಗೆ? ಸ್ನೇಹಿತೆಯನ್ನು ನೆನೆದು ಕಣ್ಣೀರಿಟ್ಟ ಅರವಿಂದ್

    ಶೇವಿಂಗ್​ ಕ್ರೀಂ ಬದಲು ಹೇರ್​ ರಿಮೂವಲ್​ ಕ್ರೀಮ್​ ಅನ್ನು ಮುಖದ ತುಂಬ ಹಚ್ಚಿಕೊಂಡ! ಮುಂದೇನಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts