More

    ಮದುವೆಯಾದ 12 ಗಂಟೆಯೊಳಗೆ ವರನಿಗೆ ತ್ರಿವಳಿ ತಲಾಖ್ ನೀಡಿದ ವಧು

    ಪಾಟ್ನಾ: ಮದುವೆಯನ್ನು ಸ್ಮರಣೀಯವಾಗಿಸಲು ಬಯಸುತ್ತಾರೆ. ಅದಕ್ಕಾಗಿ ತಮ್ಮ ಇಷ್ಟದಂತೆ ವಿಭಿನ್ನವಾಗಿ ಮಾಡಲು ಪ್ಲಾನ್ ಮಾಡುತ್ತಾರೆ. ವಧು, ವರನನ್ನು ವೇದಿಕೆಗೆ ಅದ್ದೂರಿಯಾಗಿ ಸ್ವಾಗತಿಸಬೇಕು ಎಂದು ಮೊದಲೇ ಯೋಚಿಸಿರುತ್ತಾರೆ. ಆದಾಗ್ಯೂ, ಮದುವೆಯಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸುತ್ತವೆ. ಅವು ಮದುವೆಯ ವಿಘಟನೆಗೆ ಕಾರಣವಾಗುತ್ತವೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

    ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನವವಿವಾಹಿತ ಮಹಿಳೆ ಮದುವೆಯಾದ 12 ಗಂಟೆಗಳಲ್ಲಿ ತನ್ನ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ.

    ವರ ಗುಲಾಂ ನಬಿ ನಾವಡಾದ ಅನ್ಸಾರ್ ನಗರದ ನಿವಾಸಿಯಾಗಿದ್ದು, ಫುಲ್ವಾರಿ ಷರೀಫ್‌ನ ಇಮಾಮ್ ಕಾಲೋನಿಯಲ್ಲಿರುವ ಸಮುದಾಯ ಕೇಂದ್ರದಲ್ಲಿ ವಿವಾಹವನ್ನು ನಡೆಸಲಾಯಿತು. ಮದುವೆ ಸಮಾರಂಭದಲ್ಲಿ ಊಟದ ವಿಚಾರವಾಗಿ ವಧು-ವರರ ಕಡೆಯವರ ನಡುವೆ ಜಗಳವಾಗಿತ್ತು. ಮದುವೆ ವೇಳೆ ಊಟ ಬಡಿಸುತ್ತಿರುವ ಬಗ್ಗೆ ವರನ ಕಡೆಯವರು ಕೆಲವು ಆರೋಪ ಮಾಡಿ ದೂರಿದ್ದಾರೆ. ಈ ವಿಚಾರವಾಗಿ ಇಬ್ಬರ ಕುಟುಂಬದ ನಡುವೆ ವಾಗ್ವಾದ ನಡೆದಿದೆ.

    ಕೂಡಲೇ ವರ ಗುಲಾಂ ನಬಿ ವಧುವಿನ ಸಹೋದರನೊಂದಿಗೆ ಮಾತಿನ ಚಕಮಕಿ ನಡೆಸಿ ನಬಿಗೆ ಹೊಡೆದಿದ್ದಾನೆ. ಎರಡೂ ಕಡೆಯ ಪೋಷಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಪರಿಸ್ಥಿತಿ ಹತೋಟಿ ಮೀರಿದ್ದರಿಂದ ವಿಫಲವಾಯಿತು. ವಧು ಅಂತಿಮವಾಗಿ ಮದುವೆಯನ್ನು ಮುರಿಯಲು ನಿರ್ಧರಿಸಿದರು, ಎರಡೂ ಕುಟುಂಬಗಳು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ವ್ಯರ್ಥವಾಯಿತು. ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದಳು. ಮದುವೆಯಾದ 12 ಗಂಟೆಗಳಲ್ಲಿ (ಭಾನುವಾರ ಬೆಳಗ್ಗೆ) ಮಹಿಳೆ ವರನಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ.

    ಆಗಸ್ಟ್ 2017 ರಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು. ತರುವಾಯ, ಜುಲೈ 2019 ರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಜಾರಿಗೆ ತಂದಿದ್ದು, 2019 ಆಗಸ್ಟ್ 1ರಿಂದ ದೇಶದಲ್ಲಿ ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸಿತು.

    47ನೇ ವಯಸ್ಸಿನಲ್ಲಿ ನಟಿ ಪ್ರಗತಿಗೆ ಎರಡನೇ ಮದುವೆ; ಈ ಸುದ್ದಿಗೆ ನಟಿ ಹೇಳಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts