More

    ಸೇದಿ ಎಸೆದ ಸಿಗರೆಟ್​ ತುಂಡುಗಳನ್ನೇ ‘ಬುನಾದಿ’ ಆಗಿಸಿಕೊಳ್ಳಬಹುದು!

    ನವದೆಹಲಿ: ಯಾರಾದರೂ ನಮ್ಮತ್ತ ಕಲ್ಲು ಎಸೆದರೆ ಅದನ್ನೇ ಮೆಟ್ಟಿಲಾಗಿಸಿಕೊಳ್ಳಬೇಕು ಎಂಬ ಮಾತಿದೆ. ಆದರೆ ಇಲ್ಲೊಂದು ತಂಡ ಧೂಮಪಾನಿಗಳು ಸೇದಿ ಎಸೆದ ಸಿಗರೆಟ್​ ತುಂಡುಗಳನ್ನೇ ತಮ್ಮ ಅಧ್ಯಯನಕ್ಕೆ ಬುನಾದಿ ಆಗಿಸಿಕೊಂಡಿದೆ.

    ರಾಯಲ್​ ಮೆಲ್ಬೋರ್ನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಆರ್​ಎಂಐಟಿ) ಸಂಸ್ಥೆಯ ಸಂಶೋಧಕರು ಇಟ್ಟಿಗೆ ಮಾಡಲು ಸಿಗರೆಟ್​ ತುಂಡುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ಮಾತ್ರವಲ್ಲ ಜಗತ್ತಿನಲ್ಲಿನ ಶೇ. 2.5ರಷ್ಟು ಇಟ್ಟಿಗೆ ಉತ್ಪಾದನೆಗೆ ಕೇವಲ ಶೇ. 1ರಷ್ಟು ಸಿಗರೆಟ್​ ತುಂಡುಗಳನ್ನು ಬಳಸಿದರೂ ಒಂದು ವರ್ಷದಲ್ಲಿ ಎಲ್ಲ ಸಿಗರೆಟ್​ ತುಂಡುಗಳನ್ನು ರಿಸೈಕಲ್​ ಮಾಡಿಬಿಡಬಹುದು ಎಂಬುದನ್ನೂ ಹೇಳಿದ್ದಾರೆ.

    ಇವರ ಪ್ರಕಾರ ಪ್ರತಿವರ್ಷ 6 ಟ್ರಿಲಿಯನ್​ ಸಿಗರೆಟ್​ ಜಾಗತಿಕವಾಗಿ ಉತ್ಪಾದನೆ ಆಗುತ್ತಿದ್ದು, ಅದರಿಂದ 1.2 ಮಿಲಿಯನ್​ ಟನ್​ಗಳಷ್ಟು ತ್ಯಾಜ್ಯ (ಸುಟ್ಟ ಸಿಗರೆಟ್​ ತುಂಡು) ಸೃಷ್ಟಿಯಾಗುತ್ತದೆ. ಇದೇ ಸಿಗರೆಟ್ ತುಂಡುಗಳನ್ನು ಇಟ್ಟಿಗೆ ಉತ್ಪಾದನೆಗೆ ಬಳಸಬಹುದು. ಶೇ. 1ರಷ್ಟು ಈ ಸಿಗರೆಟ್​ ತುಂಡುಗಳನ್ನು ಬಳಸಿ ಮಾಡಿದ ಇಟ್ಟಿಗೆ (ಫೈಯರ್ಡ್​ ಬ್ರಿಕ್​)ಮಾಮೂಲಿ ಇಟ್ಟಿಗೆಗಿಂತ ಗಟ್ಟಿಯಾಗಿರುತ್ತದೆ ಮತ್ತು ಇದರ ಉತ್ಪಾದನೆಗೆ ಕಡಿಮೆ ಇಂಧನ ಸಾಕು ಎಂಬುದಾಗಿ ಇವರ ಸಂಶೋಧನೆ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts