More

    ಇ-ಸ್ವತ್ತು ದಾಖಲೆ ಬೇಕಾದ್ರೆ 2,000 ರೂಪಾಯಿ ಕೊಟ್ಬಿಡು ಅಂದವನೀಗ ಕಂಬಿ ಹಿಂದೆ…

    ದಾವಣಗೆರೆ: ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮ ಪಂಚಾಯಿತಿ ಪಿಡಿಒ ಹನುಮಂತಪ್ಪ ಹಂಚಿನಮನೆ, ನಿವೇಶನ ಸಂಬಂಧಿ ದಾಖಲೆಯನ್ನು ನೀಡಲು 2 ಸಾವಿರ ರೂ. ಲಂಚ ಪಡೆಯುವಾಗ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚನ್ನೇಶಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಗ್ರಾಮದ ರಂಗನಾಥ ಎಂಬವರು ಮನೆ ನಿರ್ಮಿಸಲು ನಿವೇಶನದ ಇ-ಸ್ವತ್ತು ನೀಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. 

    ಇ ಸ್ವತ್ತು ನೀಡಲು ನಿರ್ಲಕ್ಷ್ಯ ತೋರಿದ ಪಿಡಿಒ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ 2 ಸಾವಿರ ರೂ. ನೀಡಬೇಕು, ತಂದುಕೊಡುವಂತೆ ಒತ್ತಾಯಿಸಿದ್ದಾನೆ. ದಾಖಲೆ ಸಿಗದೆ ಕಚೇರಿಗೆ ಅಲೆದು ಸುಸ್ತಾದ ರಂಗನಾಥ್ ಎಸಿಬಿ ಪೊಲೀಸರಿಗೆ ದೂರು ನೀಡಿದರು. ಚನ್ನೇಶಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ.

    ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಪಿಡಿಒನನ್ನು ಬಂಧಿಸಿದರು. ಎಸಿಬಿ ಡಿಎಸ್‌ಪಿ ಪರಮೇಶ್ವರ್ ನೇತೃತ್ವದಲ್ಲಿ ದಾಳಿ ನಡೆಯಿತು. ಸಿಪಿಐ ಮದುಸೂದನ್, ನಾಗಪ್ಪ ಹಾಗೂ ಸಿಬ್ಬಂದಿ ಇದ್ದರು.

    ಕಾಳಜಿ ಕೇಂದ್ರಗಳಲ್ಲಿ ಮೊಟ್ಟೆ, ಬಾಳೆಹಣ್ಣು, ಚಪಾತಿ ಊಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts