More

    ಫೆ.21 ಬ್ರೇಕ್​ ಅಪ್ ಡೇ: ಈ ದಿನದ ಮಹತ್ವ, ಯಾಕೆ ಆಚರಿಸುತ್ತಾರೆ ಕಾರಣ ಹೀಗಿದೆ?

    ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಿರೋಧಿ ವಾರದ ಕೊನೆಯ ದಿನ. ಪ್ರೇಮಿಗಳ ದಿನ ಮುಗಿದ ಬೆನ್ನಲೇ ಫೆಬ್ರವರಿ 21 ರಂದು ಬ್ರೇಕ್​ಆಪ್​ ಡೇ ಮಾಡಲಾಗುತ್ತದೆ. ಹಾಗೆ ಇದೇ ತಿಂಗಳ ಕೊನೆಯ ವಾರವನ್ನು ಬ್ರೇಕ್​ಆಪ್​ ವೀಕ್​ ಎಂದು ಸಹ ಆಚರಿಸುತ್ತಾರೆ.

    ಇದನ್ನೂ ಓದಿ:ಪೆನ್ಶನ್ ಫಂಡ್ ರಿಲೀಸ್‌ಗೆ ಕಂಡೀಷನ್!, ವಿವಿ ಹೆಚ್ಚುವರಿ ಸಿಬ್ಬಂದಿ ಆಯ್ಕೆ ರದ್ದು ನಂತರವೇ 20 ಕೋಟಿ ರೂ. ಬಿಡುಗಡೆ

     ಅದಕ್ಕೂ ಮುನ್ನ ವ್ಯಾಲೆಂಟೈನ್ಸ್​ ಡೇ ವೀಕ್​ ಅನ್ನು 7 ದಿನಗಳ ಕಾಲ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಫೆಬ್ರವರಿ 7 – ರೋಸ್ ಡೇ, ಫೆಬ್ರವರಿ 8 – ಪ್ರಪೋಸ್ ಡೇ, ಫೆಬ್ರವರಿ 9 – ಚಾಕೊಲೇಟ್ ಡೇ, ಫೆಬ್ರವರಿ 10-ಟೆಡ್ಡಿ ಡೇ, ಫೆಬ್ರವರಿ 11 – ಪ್ರಾಮಿಸ್ ಡೇ, ಫೆಬ್ರವರಿ 12 – ಹಗ್ ಡೇ, ಫೆಬ್ರವರಿ 13 – ಕಿಸ್ ಡೇ, ಫೆಬ್ರವರಿ 14 – ಪ್ರೇಮಿಗಳ ದಿನ ಆಚರಿಸಲಾಯಿತು. ಆದರೆ ಫೆಬ್ರವರಿ 14ರ ನಂತರ ಪ್ರೇಮಿಗಳ ವಿರೋಧಿ ವಾರವನ್ನು ಒಂದು ವಾರ ಆಚರಿಸಲಾಗುತ್ತದೆ. ಇದು ಫೆಬ್ರವರಿ 21 ಬ್ರೇಕ್ ಆಪ್ ಡೇ ಆಚರಣೆ ಮೂಲಕ ಕೊನೆಗೊಳ್ಳುತ್ತದೆ.

    ಫೆ.21 ಬ್ರೇಕ್​ ಅಪ್ ಡೇ: ಈ ದಿನದ ಮಹತ್ವ, ಯಾಕೆ ಆಚರಿಸುತ್ತಾರೆ ಕಾರಣ ಹೀಗಿದೆ?

    ಪ್ರೇಮಿಗಳ ನಡುವಿನ ಸುಂದರ ಸಂಬಂಧವನ್ನು ಗಟ್ಟಿಗೊಳಿಸುವ ಕಾರಣವಾಗುವ ಪ್ರೇಮಿಗಳ ದಿನಕ್ಕೆ ವಿರೋಧವಾಗಿ ಬ್ರೇಕ್​ಅಪ್​ ಡೇ ಆಚರಣೆ ಮಾಡುತ್ತಾರೆ. ಈ ದಿನವನ್ನು ವಿದೇಶಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಇದನ್ನು ಆಂಟಿ ವಾಲೆಂಟೈನ್ಸ್​ ವೀಕ್​ ಎಂದು ಕರೆಯುತ್ತಾರೆ. ಪ್ರೀತಿಸದವರು ಮತ್ತು ಪ್ರೇಮದಿಂದ ಮುಕ್ತಿಯಾದವರು ಈ ದಿನವನ್ನು ಆಚರಿಸುತ್ತಾರೆ. ಪ್ರೀತಿಯಿಂದ ಹೊರ ಬಂದವರು ಹಾಗೂ ಸಿಂಗಲ್​ ಆಗಿ ಇರುವವರು ಇದೇ ದಿನವನ್ನು ಭರ್ಜರಿಯಾಗಿ ಸೆಲೆಬ್ರೇಷನ್​ ಮಾಡುತ್ತಾರೆ.

    ದಿನಾಂಕ: ಪ್ರತಿ ವರ್ಷ, ಫೆಬ್ರವರಿ 21 ರಂದು ಬ್ರೇಕಪ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ಬುಧವಾರದಂದು ವಿಶೇಷ ದಿನ ಆಚರಿಸಲಾಗುತ್ತದೆ.

    ಮೊದಲೆಲ್ಲಾ ಸಂಬಂಧಗಳಲ್ಲಿ ನಂಬಿಕೆ, ವಿಶ್ವಾಸ ಮತ್ತು ಪರಸ್ಪರರ ಮೇಲೆ ಗೌರವ ಇರುತ್ತಿತ್ತು. ಆದರೆ ಈಗಿನ ಸಂಬಂಧಗಳಲ್ಲಿ ಇವೆಲ್ಲವೂ ಇಲ್ಲದಂತಾಗಿದೆ ಅಂತ ಹೇಳಬಹುದು. ಹೌದು, ಈಗಿನ ಸಂಬಂಧಗಳು ಎಷ್ಟು ದಿನಗಳ ಕಾಲ ಚೆನ್ನಾಗಿರುತ್ತವೆ ಅಂತ ಹೇಳುವುದು ಇರಲಿ, ಊಹಿಸುವುದಕ್ಕೂ ಸಹ ಕಷ್ಟವಾಗುತ್ತಿದೆ.

    ಅದರಲ್ಲೂ ಈ ಹುಡುಗ ಮತ್ತು ಹುಡುಗಿ ನಡುವೆ ಯಾವಾಗ ಪ್ರೀತಿ ಹುಟ್ಟುತ್ತೋ ಮತ್ತು ಯಾವ ಕ್ಷಣದಲ್ಲಿ ಅವರಿಬ್ಬರ ನಡುವೆ ಬ್ರೇಕ್ಅಪ್ ಆಗುತ್ತದೆ ಅಂತ ಯಾರೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಬ್ರೇಕ್‌ ಡೇ ಯನ್ನು ಆಚರಿಸಲಾಗುತ್ತದೆ. ಆದರೆ ಈ ಆಚರಣೆಗೆ ಯಾವುದೇ ಇತಿಹಾಸವಿಲ್ಲ. ತಮ್ಮ ಪ್ರೀತಿಯಿಂದ ದೂರವಾಗಲು ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.

    ಒಬ್ಬರ ಮೇಲೆ ಪ್ರೀತಿಯಾದಾಗ ನೀವು ಎಷ್ಟು ಖುಷಿಯಾಗಿರುತ್ತೀರೋ, ಸಂಬಂಧಗಳು ಮುರಿದಾಗ ನೂರು ಪಟ್ಟು ದುಃಖವಾಗುತ್ತದೆ. ಯಾವುದೇ ಸಂಬಂಧವು ಮುರಿದುಬಿದ್ದ ನಂತರ, ಸ್ವಲ್ಪ ಸಮಯದವರೆಗೆ ನಿಮ್ಮನ್ನು ನಿಭಾಯಿಸುವುದು ಸ್ವಲ್ಪ ಕಷ್ಟ. ನೀವು ಯಾರೊಂದಿಗಾದರೂ ಭಾವನಾತ್ಮಕವಾಗಿ ಬಂಧವನ್ನು ಹೊಂದಿದ್ದರೆ ಅವರಿಂದ ಬೇರ್ಪಟ್ಟು ಹೊಸ ಬದುಕು ಕಟ್ಟಿಕೊಳ್ಳುವುದು ತುಂಬಾ ಕಷ್ಟ.

    ಈ ಪರಿಸ್ಥಿತಿಯು ಹಲವಾರು ದಿನಗಳವರೆಗೆ ನಿಮ್ಮನ್ನು ತೊಂದರೆಗೊಳಿಸಬಹುದು. ಬ್ರೇಕ್​ಅಪ್​ ಡೇ ದಿನದಂದು ಹೊಸ ವಿಷಯಗಳನ್ನು ಕಲಿಯುವುದು ನಿಮ್ಮ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಹಳೆಯ ಸಂಬಂಧವನ್ನು ಮರೆತುಬಿಟ್ಟು ಹೊಸ ಜೀವನವನ್ನು ರೂಪಿಸಿಕೊಳ್ಳುವುದು ಈ ದಿನದ ಮಹತ್ವ ಪಡೆದುಕೊಳ್ಳುತ್ತದೆ.

    ಮರಾಠರಿಗೆ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕರಿಸಿದ ಮಹಾರಾಷ್ಟ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts