More

    VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

    ಬೆಂಗಳೂರು: ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಲಾಕ್‌ಡೌನ್ ವೇಳೆ ಕ್ರಿಕೆಟಿಗರಿಗೆ ‘ಕೀಪ್ ಇಟ್ ಅಪ್’ ಸವಾಲೆಸೆದಿದ್ದರು. ಚೆಂಡನ್ನು ಬ್ಯಾಟ್ ಮೂಲಕ ಬೌನ್ಸಿಂಗ್ ಮಾಡುವ ಚಾಲೆಂಜ್ ಇದಾಗಿತ್ತು. ಇದಕ್ಕೆ ಪ್ರತಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚೆಂಡು ಬೌನ್ಸಿಂಗ್ ಮಾಡುವ ಮೂಲಕ ಯುವರಾಜ್‌ಗೆ ವಿಶೇಷವಾದ ಸವಾಲನ್ನು ನೀಡಿದ್ದರು. ಇದನ್ನು ಸ್ವೀಕರಿಸಿರುವ ಯುವರಾಜ್ ಸಿಂಗ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮನೆಯೊಳಗೆ 100 ಬಾರಿ ಬೌನ್ಸಿಂಗ್ ಮಾಡಿರುವ ತಮ್ಮ ದಾಖಲೆಯನ್ನು ಮುರಿಯುವಂತೆ ಸಚಿನ್‌ಗೆ ಪ್ರತಿ ಸವಾಲು ಎಸೆದಿದ್ದಾರೆ.

    ಇದನ್ನೂ ಓದಿ: 100 ಶ್ರೀಮಂತ ಕ್ರೀಡಾಪಟುಗಳಲ್ಲಿ ಕೊಹ್ಲಿ ಏಕೈಕ ಭಾರತೀಯ ಕ್ರಿಕೆಟಿಗ, ವಿಶ್ವದಲ್ಲಿ 66ನೇ ಸ್ಥಾನ; ಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ಟಾಪ್

    ಲಟ್ಟಣಿಗೆಯಿಂದ ಟೆನಿಸ್ ಬಾಲನ್ನು ಬೌನ್ಸ್ ಮಾಡುತ್ತಿರುವ ಮತ್ತು ಅಡುಗೆ ಮನೆಯ ಯಾವ ವಸ್ತುಗಳಿಗೂ ಹಾನಿಯಾಗದಿರುವ ವಿಡಿಯೋವೊಂದನ್ನು ಯುವರಾಜ್ ಸಿಂಗ್ ಭಾನುವಾರ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಜತೆಗೆ, ‘ಮಾಸ್ಟರ್ ನೀವು ಮೈದಾನದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದೀರಿ. ಕಿಚನ್ ಒಳಗಿನ ನನ್ನ ಶತಕವನ್ನು ಮುರಿಯುವ ಸಮಯ ಇದಾಗಿದೆ. ಸುದೀರ್ಘವಾಗಿರುವ ಕಾರಣ ಪೂರ್ಣ ವಿಡಿಯೋವನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಆದರೆ ನಾನು 100 ಬಾರಿ ಚೆಂಡು ಬೌನ್ಸ್ ಮಾಡಿರುವೆ ಪಾಜಿ. ನೀವು ಅಡುಗೆ ಮನೆಯಲ್ಲಿರುವ ಇತರ ವಸ್ತುಗಳನ್ನು ಮುರಿಯುವುದಿಲ್ಲ ಎಂಬ ಭರವಸೆಯಲ್ಲಿದ್ದೇನೆ’ ಎಂದು ಯುವಿ ಬರೆದುಕೊಂಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಯುವಿ, ‘ನನ್ನ ಶತಕ ಪೂರ್ಣಗೊಳಿಸಿದೆ. ಈಗ ನಿಮ್ಮ ಸರದಿ… ಎಷ್ಟಾದರೂ ಗುರುವಿನ ಶಿಷ್ಯನಲ್ಲವೇ ನಾನು’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ದೇಸಿ ಅಖಾಡದಲ್ಲಿ ಸಾಕ್ಷಿ ಮಲಿಕ್ ಅಭ್ಯಾಸ…

    ಇದಕ್ಕೆ ಮುನ್ನ ಯುವಿ ಆರಂಭಿಸಿದ್ದ ಕೀಪ್ ಇಟ್ ಅಪ್‌ಗೆ ಟ್ವಿಸ್ಟ್ ನೀಡುವ ಪ್ರಯತ್ನದಲ್ಲಿ ಸಚಿನ್ ತೆಳುವಾದ ಬಟ್ಟೆಯನ್ನು ಕಣ್ಣಿಗೆ ಕಟ್ಟಿಕೊಂಡು ಚೆಂಡು ಬೌನ್ಸ್ ಮಾಡಿದ್ದರು. ಆದರೆ ವಿಡಿಯೋದ ಕೊನೆಯಲ್ಲಿ ಆ ಬಟ್ಟೆಯ ಮೂಲಕ ಚೆಂಡನ್ನು ನೋಡಬಹುದಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದರು. ರೋಹಿತ್ ಶರ್ಮ, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಶ್ರೇಯಸ್ ಅಯ್ಯರ್ ಸಹಿತ ಹಲವಾರು ಕ್ರಿಕೆಟಿಗರು ಕೀಪ್ ಇಟ್ ಅಪ್ ಚಾಲೆಂಜ್ ಸ್ವೀಕರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts